ಬೆಂಗಳೂರು: ಯುವಕನೊಬ್ಬ ತನ್ನ ಸ್ನೇಹಿತೆಯೊಂದಿಗೆ ಫೋನ್ ನಲ್ಲಿ ಮಾತನಾಡಿದ್ದಾನೆ ಎಂಬ ಕಾರಣಕ್ಕೆ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ.
ಫೋನ್ನಲ್ಲಿ ಮಾತನಾಡಿದ್ದಕ್ಕೆ ಸಿಟ್ಟಿಗೆದ್ದ ಯುವಕನ ಸ್ನೇಹಿತ, ಚಾಕು ಇರಿದು, ಮಚ್ಚಿನಿಂದ ತಲೆಗೆ ಹಲ್ಲೆ ಮಾಡಿದ್ದಾನೆ. ಈ ಘಟನೆ ಇಲ್ಲಿಯ ನಾಯಂಡಹಳ್ಳಿ ಹತ್ತಿರ ನಡೆದಿದೆ. ಹಲ್ಲೆಗೊಳಗಾದ ಯುವಕ ಕಾರ್ತಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಧನುಷ್ ಹಾಗೂ ಶಾಬುದ್ದೀನ್ ಎಂಬುವವರನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.
ಧನುಷ್ ಹಾಗೂ ಕಾರ್ತಿಕ್ ಒಂದೇ ಪ್ರದೇಶದಲ್ಲಿದ್ದರು. ಆರೋಪಿ ಧನುಷ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ, ಇದೇ ಯುವತಿಯ ನಂಬರ್ ಪಡೆದು ಸ್ನೇಹಿತ ಕಾರ್ತಿಕ್ ಕರೆ ಮಾಡಿ ಮಾತನಾಡುತ್ತಿದ್ದ. ಫಾಲೋ ಮಾಡಿ ಧನುಷ್ ಗರ್ಲ್ ಫ್ರೆಂಡ್ ಗೆ ಕಾಟ ನೀಡುತ್ತಿದ್ದ. ಇದರಿಂದ ಬೇಸರಗೊಂಡ ಯುವತಿ ಎಲ್ಲ ವಿಚಾರವನ್ನು ಧನುಷ್ ಗೆ ಹೇಳಿದ್ದಳು. ಇದರಿಂದ ಕೋಪಗೊಂಡ ಧನುಷ್ ಮತ್ತೋರ್ವ ಸ್ನೇಹಿತ ಶಾಬುದ್ದೀನ್ ಜೊತೆ ಹೋಗಿ ಮಚ್ಚು ಹಾಗೂ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಕಾರ್ತಿಕ್, ತಾನೇ ಬೈಕ್ ಹತ್ತಿ ಆಸ್ಪತ್ರೆಗೆ ದಾಖಲಾಗಿದ್ದಾನೆ.