ಅವಳಿ ಮಕ್ಕಳಿಗೆ ಜನ್ಮ ನೀಡಿದ ಯುವತಿ, ತಂದೆ ಮಾತ್ರ ಬೇರೆ ಬೇರೆ…
ಬ್ರೆಜಿಲ್ನಿಂದ ಅಚ್ಚರಿಯ ಘಟನೆಯೊಂದು ವರದಿಯಾಗಿದೆ. ಬ್ರೆಜಿಲ್ನ ಗೋಯಾಸ್ ಪ್ರಾಂತ್ಯದ ಮಿನೆರೋಸ್ ಜಿಲ್ಲೆಯಲ್ಲಿ 19 ವರ್ಷದ ಯುವತಿಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಮಕ್ಕಳ ತಂದೆ ಬೇರೆ ಬೇರೆ ಎಂಬುದು ತಿಳಿದುಬಂದಿದೆ.
ಒಂದೇ ದಿನ ಇಬ್ಬರು ಪುರುಷರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ 19 ವರ್ಷದ ಯುವತಿಯೊಬ್ಬಳು ಇಬ್ಬರಿಂದಲೂ ಅವಳಿ ಮಕ್ಕಳಿಗೆ ಜನ್ಮ ನೀಡಿರುವುದಾಗಿ ತಿಳಿಸಿದ್ದಾಳೆ. ಅವಳಿ ಮಕ್ಕಳ ತಂದೆ ಯಾರು ಎಂಬ ಬಗ್ಗೆ ಗೊಂದಲವಿತ್ತು, ಆದ್ದರಿಂದ ಖಚಿತಪಡಿಸಲು ಡಿಎನ್ಎ ಪರೀಕ್ಷೆ ಮಾಡಿಸಿದಾಗ ವರದಿ ನೋಡಿದ ಹುಡುಗಿಗೆ ಆಘಾತವಾಗಿದೆ. ವಿಭಿನ್ನ ತಂದೆಯ ಮಕ್ಕಳು, ಆದರೆ ಇಬ್ಬರಲ್ಲೂ ಹೋಲಿಕೆ ಇದೆ ಎಂದು ಹೇಳಲಾಗಿದೆ
ಈ ಕುರಿತಂತೆ ಯುವತಿಗೆ ಚಿಕಿತ್ಸೆ ನೀಡಿದ ವೈದ್ಯ ತುಲಿಯೊ ಜಾರ್ಜ್ ಫ್ರಾಂಕೊ ಅವರು ಪ್ರತಿಕ್ರಿಯಿಸಿ, ಈ ರೀತಿಯ ಪ್ರಕರಣಗಳು ಬಹಳ ಅಪರೂಪ. 10 ಲಕ್ಷದಲ್ಲಿ ಒಂದು ಪ್ರಕರಣ ಇಂತಹ ರೀತಿ ಇರುತ್ತದೆ. ವೈಜ್ಞಾನಿಕವಾಗಿ ಹೇಳುವುದಾದರೇ ಇದಕ್ಕೆ ಹೆಟೆರೊಪರೆಂಟಲ್ ಸೂಪರ್ಫೆಕಂಡೇಶನ್ ಎಂದು ಕರೆಯುತ್ತಾರೆ. ಪ್ರಪಂಚದಾದ್ಯಂತ ಇಂಥಹ ಕೇವಲ 20 ಪ್ರಕರಣಗಳಿವೆ ಎಂದು ಹೇಳಿದ್ದಾರೆ.
ಈ ಪೈಕಿ ಈಗ ಒಂದು ಮಗುವಿನ ತಂದೆ ಇಬ್ಬರನ್ನೂ ನೋಡಿಕೊಳ್ಳೂತ್ತಿದ್ದಾರೆ..








