ಮುಂಬಯಿ : ಅಪ್ರಾಪ್ತ ವಯಸ್ಸಿನ ಬಾಲಕಿಗೆ ಋತುಸ್ರಾವವಾಗಿದೆ. ಆದರೆ, ಇದು ಅವಳ ಗಮನಕ್ಕೆ ಬಂದಿಲ್ಲ. ಹೀಗಾಗಿ ಬಟ್ಟೆಯಲ್ಲಿ ರಕ್ತದ ಕಲೆಗಳಾಗಿವೆ. ಇದನ್ನೇ ಗಮನಸಿದ ಸಹೋದರ, ಅವಳ ಮೇಲೆ ಸಂಶಯಗೊಂಡು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಬಾಲಕಿಯು ತನ್ನ ಸಹೋದ ಹಾಗೂ ಅತ್ತಿಕೆಯೊಂದಿಗೆ ವಾಸಿಸುತ್ತಿದ್ದಳು. ಸಹೋದರ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದ. ಈ ರೀತಿ ಬದಲಾವಣೆಯಾಗುತ್ತಿದ್ದಂತೆ ಬಾಲಕಿ ಅವರೊಂದಿಗೆ ಹೇಳಲು ಸಂಕೋಚ ಪಟ್ಟಿದ್ದಾಳೆ. ಅವಳಿಗೆ ಋತುಸ್ರಾವದ ಜ್ಞಾನ ಕೂಡ ಇಲ್ಲ. ಹೀಗಾಗಿ ಅವಳು ಈ ವಿಷಯವನ್ನು ಯಾರಿಗೂ ಹೇಳಿಲ್ಲ. ಆದರೆ, ಇದರಿಂದ ಅನುಮಾನಗೊಂಡ ಪಾಪಿ ಸಹೋದರ, ತಂಗಿ ದಾರಿ ತಪ್ಪಿರಬಹುದು ಎಂದು ತಿಳಿದು ಕೊಲೆ ಮಾಡಿದ್ದಾನೆ.
ಮನುಷ್ಯನಿಗೆ ಸ್ವಲ್ಪ ತಾಳ್ಮೆಬೇಕು ಎನ್ನುವುದು ಇದಕ್ಕೆ. ಕೇವಲ ರಕ್ತದ ಕಲೆಗಳನ್ನೇ ನೋಡಿದ ಪಾಪಿ ಅಣ್ಣ ಕೊಲೆ ಮಾಡಿ ಬಿಟ್ಟಿದ್ದಾನೆ. ಕೊಲೆ ಮಾಡಿದ್ದಷ್ಟೆ ಅಲ್ಲದೇ, ಆಕೆಯ ಬಾಯಿ, ನಾಲಿಗೆ ಹಾಗೂ ದೇಹದ ಇನ್ನಿತರ ಭಾಗಗಳನ್ನು ಸುಟ್ಟಿದ್ದಾನೆ. ಅವಳನ್ನು ಕೂಡಲೇ ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಬಾಲಕಿ ಸಾವನ್ನಪ್ಪಿದ್ದಾಳೆಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಸಹೋದರನ ವಿರುದ್ಧ ಉಲ್ಲಾಸ್‍ನಗರ ಪೊಲೀಸ್ ಠಾಣೆ (Ulhasnagar police station) ಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.








