Brij Bhushan : ಕುಸ್ತಿ ಫೆಡರೇಷನ್ ಅಧ್ಯಕ್ಷನ ವಿರುದ್ಧ ಲೈಂಗಿಕ ಕಿರುಕುಳ ಆರೋಪ : ವಿನೇಶ್ ಫೋಗಟ್ ಸೇರಿ ಹಲವರಿಂದ ಗಂಭೀರ ಆರೋಪ..
ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಮತ್ತು ಇತರ ಕುಸ್ತಿಪಟುಗಳು ಬುಧವಾರ ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಸರಣ್ ಸಿಂಗ್ ಮತ್ತು ತರಬೇತುದಾರರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಆದರೆ, ಈ ಆರೋಪಗಳನ್ನ ಬ್ರಿಜ್ ಭೂಷಣ್ ನಿರಾಕರಿಸಿದ್ದಾರೆ.
ಈ ಆರೋಪಗಳು ಸಾಬೀತಾದರೆ ನೇಣು ಹಾಕಿಕೊಳ್ಳುವುದಾಗಿ ಡಬ್ಲ್ಯುಎಫ್‌ಐ ಪ್ರೆಸಿಡೆಂಟ್ ತಿಳಿಸಿದ್ದಾರೆ. ಬ್ರಿಜ್ ಭೂಷಣ್ ಮತ್ತು ತರಬೇತುದಾರರು ಲೈಂಗಿಕ ಕಿರುಕುಳ ನೀಡಿರುವುದನ್ನ ವಿರೋಧಿಸಿ ಕುಸ್ತಿಪಟುಗಳು ನಿನ್ನೆ ಬುಧವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯಲ್ಲಿ ಸ್ಟಾರ್ ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ವಿನೇಶ್ ಫೋಗಟ್, ಸಂಗೀತಾ ಫೋಗಟ್, ಸುಮಿತ್ ಮಲಿಕ್, ಸಾಕ್ಷಿ ಮಲಿಕ್, ಸರಿತ್ ಮೋರೆ ಸೇರಿದಂತೆ 30 ಸ್ಟಾರ್ ಕುಸ್ತಿಪಟುಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ಬ್ರಿಜ್ ಭೂಷಣ್ ಮತ್ತು ಕೋಚ್‌ಗಳ ವಿರುದ್ಧ ಸಂಚಲನಾತ್ಮಕ ಆರೋಪಗಳನ್ನ ಮಾಡಲಾಯಿತು.
ವಿನೇಶ್ ಫೋಗಟ್ ಮಾತನಾಡಿ. ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಅವರಿಂದಾಗಿ ನಾನು ಸಾಕಷ್ಟು ಭಾವನಾತ್ಮಕ ಯಾತನೇ ಅನುಭವಿಸುತ್ತಿದ್ದೇನೆ. ಒಂದು ಹಂತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೆ ಎಂದು ಹೇಳಿದ್ದಾರೆ. ತಮ್ಮ ನೋವಿನ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ ಮತ್ತು ಬ್ರಿಜ್ ಭೂಷಣ್ ವಿರುದ್ಧ ದೂರು ನೀಡಿದ್ದಕ್ಕೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವಿನೇಶ್ ಫೋಗಟ್ ಕಣ್ಣೀರು ಹಾಕಿದ್ದಾರೆ.
ಮತ್ತೊಬ್ಬ ಸ್ಟಾರ್ ಕುಸ್ತಿಪಟು ಬಜರಂಗ್ ಪುನಿಯಾ ಕೂಡ ಬ್ರಿಜ್ ಭೂಷಣ್ ವಿರುದ್ಧ ಆರೋಪ ಮಾಡಿದ್ದಾರೆ. ಫೆಡರೇಶನ್‌ನಲ್ಲಿರುವ ಜನರಿಗೆ ಆಟದ ಬಗ್ಗೆ ತಿಳಿದಿಲ್ಲ. ತಮ್ಮ ಹೋರಾಟ ಸರ್ಕಾರ ಅಥವಾ ಭಾರತೀಯ ಕ್ರೀಡಾ ಪ್ರಾಧಿಕಾರದ ವಿರುದ್ಧ ಅಲ್ಲ, ಕುಸ್ತಿ ಫೆಡರೇಷನ್ ವಿರುದ್ಧ ಎಂದು ಪುನಿಯಾ ಸ್ಪಷ್ಟಪಡಿಸಿದ್ದಾರೆ.
ಆದರೆ, ಬ್ರಿಜ್ ಭೂಷಣ್ ಈ ಆರೋಪಗಳನ್ನ ಸಾರಾ ಸಗಟಾಗಿ ತಳ್ಳಿ ಹಾಕಿದ್ದಾರೆ. ಈ ವಿಷಯದ ಬಗ್ಗೆ ಯಾವುದೇ ವಿಚಾರಣೆಗೆ ಸಿದ್ಧ ಇಂತಹ ಕಿರುಕುಳ ನಡೆದಿರುವುದು ಕಂಡು ಬಂದರೆ ನೇಣು ಹಾಕಿಕೊಳ್ಳಲು ಸಿದ್ಧ ಎಂದು ಬ್ರಿಜ್ ಭೂಷಣ್ ಪ್ರತಿಕ್ರಿಯಿಸಿದ್ದಾರೆ.
Brij Bhushan: Allegation of sexual harassment against the President of the Wrestling Federation: Vinesh Phogat including many serious allegations..







