ಬ್ರಿಟನ್ – ಮೆಥೋಡಿಸ್ಟ್ ಚರ್ಚ್ನಲ್ಲಿ ಸಲಿಂಗಿಗಳ ವಿವಾಹಕ್ಕೆ ಅನುಮತಿ
ಬ್ರಿಟನ್ನ ಮೆಥೋಡಿಸ್ಟ್ ಚರ್ಚ್ ತನ್ನ ಆವರಣದಲ್ಲಿ ಸಲಿಂಗಿ ಜೋಡಿಗೆ ಮದುವೆಯಾಗಲು ಅವಕಾಶ ನೀಡಲಾಗುವುದು ಎಂದು ಘೋಷಿಸಿದೆ.
ಈ ಸಂಬಂಧ ನಡೆಸಲಾದ ಮೆಥೋಡಿಸ್ಟ್ ಸಭೆಯಲ್ಲಿ 254 ಮಂದಿ ಪರವಾಗಿ ಮತ್ತು 46 ಮಂದಿ ವಿರುದ್ಧವಾಗಿ ಮತ ಚಲಾಯಿಸಿದರೆ, ಉಳಿದವರು ಪರವಾಗಿ ಬೆಂಬಲ ಸೂಚಿಸಿದ್ದರು.
ಈ ಚರ್ಚ್ 164,000 ಸದಸ್ಯರನ್ನು ಒಳಗೊಂಡಿದ್ದು, ಇದು ಬ್ರಿಟನ್ನ ನಾಲ್ಕನೇ ಅತಿ ದೊಡ್ಡ ಚರ್ಚ್ ಆಗಿದೆ. ಬದಲಾಗುತ್ತಿರುವ ಸಮಾಜದಲ್ಲಿ ನಿಜಕ್ಕೂ ಇದೊಂದು ಮಹತ್ವದ ಹೆಜ್ಜೆಯಾಗಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.