ಕಲಬುರಗಿ: ವರಸೆಯಲ್ಲಿ ಸಹೋದರ- ಸಹೋದರಿ ಆಗುತ್ತಿದ್ದವರ ಪ್ರೀತಿಗೆ ಕುಟುಂಬಸ್ಥರು ವಿರೋಧಿಸಿದ್ದಕ್ಕೆ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಯಡ್ರಾಮಿ (Yadrami) ತಾಲೂಕಿನ ಮಾಗಣಗೇರೆ ಗ್ರಾಮದಲ್ಲಿ ನಡೆದಿದೆ. ಶಶಿಕಲಾ (20) ಗೊಲ್ಲಾಳಪ್ಪ (24) ಆತ್ಮಹತ್ಯೆ ಮಾಡಿಕೊಂಡವರು. ಶಶಿಕಲಾ ಹಾಗೂ ಗೊಲ್ಲಾಳಪ್ಪ ಇಬ್ಬರೂ ವರಸೆಯಲ್ಲಿ ಅಣ್ಣ- ತಂಗಿ ಆಗಿದ್ದರು. ಹೀಗಾಗಿ ಶಶಿಕಲಾ ಕುಟುಂಬಸ್ಥರು ಬೇರೆ ಮದುವೆ ಮಾಡಲು ಮಂದಾಗಿದ್ದರು. ಮುಂದಿನ ತಿಂಗಳು ಮದುವೆ ಕೂಡ ನಿಶ್ಚಯವಾಗಿತ್ತು.
ಈ ವಿಷಯ ತಿಳಿಯುತ್ತಿದ್ದಂತೆ ಗೊಲ್ಲಾಳಪ್ಪ ಯುವತಿಯನ್ನು ನಿನ್ನೆ ರಾತ್ರಿ ಕರೆದುಕೊಂಡು ಹೋಗಿದ್ದಾನೆ. ಆನಂತರ ಇಬ್ಬರೂ ಮಾಗಣಪುರ ಗ್ರಾಮದ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಅಲ್ಲದೇ, ಮದುವೆಯಾಗುತ್ತಿದ್ದಂತೆ ಅದೇ ಗ್ರಾಮದ ಜಮೀನುವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು ಸೆಲ್ಫಿ ಫೋಟೋ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.