ಗುರಾಯಿಸಿದ್ದಕ್ಕೆ ವ್ಯಕ್ತಿಯ ಕೊಲೆ
ಬೆಂಗಳೂರು : ವ್ಯಕ್ತಿಯೊಬ್ಬ ಗುರಾಯಿಸಿದ ಎಂಬ ಕಾರಣಕ್ಕೆ ಯುವಕ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆಂಗೆರಿಯಲ್ಲಿ ನಡೆದಿದೆ.
ಭರತ್ ಕೊಲೆಯಾದ ದುರ್ದೈವಿ. ಭರತ ಕೆಂಗೆರಿಯಲ್ಲಿ ಜರುಗಿದ ಕರಗ ನೋಡುಲು ತನ್ನ ಸ್ನೇಹಿತರ ಜೊತೆ ಬಂದಿದ್ದ. ಈ ಸಮಯದಲ್ಲಿ ಗುರಾಯಿಸಿದ ಎಂದು ಕೊಲೆ ಮಾಡಲಾಗಿದೆ.
ನಡೆದಿದ್ದೇನು:? ಭರತ ಕೆಂಗೆರಿಯಲ್ಲಿ ಜರುಗಿದ ಕರಗ ನೋಡುಲು ತನ್ನ ಸ್ನೇಹಿತರ ಜೊತೆ ಬಂದಿದ್ದ. ಈ ವೇಳೆ ಬೈಕ್ ಟಚ್ ಆಯ್ತು ಅಂತಾ ಯುವಕರ ಗುಂಪೊಂದು ಭರತ್ ಜೊತೆ ಕಿರಿಕ್ ಮಾಡಿದೆ. ಈ ವೇಳೆ ಭರತ್ ಗುರಾಯಿಸಿದ್ದಾನೆ ಎನ್ನಲಾಗಿದೆ. ಇಷ್ಟಕ್ಕೆ ಸಿಟ್ಟಿಗೆದ್ದ ಯುವಕರು ಜಗಳ ಆರಂಭಿಸಿದ್ದಾರೆ. 10 ಜನ ಯುವಕರನ್ನು ಕರೆಸಿದ ಪುಂಡರ ಗುಂಪು ಭರತ್ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಡರಾತ್ರಿ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ. ರೈಲ್ವೆ ಸಿಬ್ಬಂದಿ ಯುಡಿಆರ್ ಪ್ರಕರಣವೊಂದರ ಪರಿಶೀಲನೆ ನಡೆಸುವಾಗ ಗುಂಪಾಗಿ ಗ್ಯಾಂಗ್ವೊಂದು ದೇಹ ಎಳೆದುಕೊಂಡು ಹೋಗುತ್ತಿರೋದು ಕಂಡು ಬಂದಿದೆ.
ಆ ವೇಳೆ ರೈಲ್ವೆ ಸಿಬ್ಬಂದಿ ಅವರ ಬಳಿ ಹೋಗಲು ಮುಂದಾದಾಗ ಆರೋಪಿಗಳು ಮೃತದೇಹ ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ರೈಲ್ವೆ ಎಸ್ಪಿ ಸಿರಿಗೌರಿ ಮಾಹಿತಿ ನೀಡಿದ್ದಾರೆ.