ಕಾಂಗ್ರೆಸ್ ಬುಲ್ಡೋಸರ್ ವಿಕೃತಿ ಅಳವಡಿಸಿಕೊಂಡಿದ್ದರೆ ಬಿಜೆಪಿಗರು ನಿರಾಶ್ರಿತರಾಗಿರುತ್ತಿದ್ದರು
ಬೆಂಗಳೂರು : ಕಾಂಗ್ರೆಸ್ ಪಕ್ಷವು ತನ್ನ ಆಡಳಿತದಲ್ಲಿ ‘ಬುಲ್ಡೋಸರ್ ವಿಕೃತಿ’ಯನ್ನು ಅಳವಡಿಸಿಕೊಂಡಿದ್ದರೆ ಇಂದು ಬಿಜೆಪಿಗರೆಲ್ಲರೂ ನಿರಾಶ್ರಿತರಾಗಿರುತ್ತಿದ್ದರು ಎಂದು ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಕುಟುಕಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಕಾಂಗ್ರೆಸ್ ಪಕ್ಷವು ತನ್ನ ಆಡಳಿತದಲ್ಲಿ ‘ಬುಲ್ಡೋಸರ್ ವಿಕೃತಿ’ಯನ್ನು ಅಳವಡಿಸಿಕೊಂಡಿದ್ದರೆ ಇಂದು ಬಿಜೆಪಿಗರೆಲ್ಲರೂ ನಿರಾಶ್ರಿತರಾಗಿರುತ್ತಿದ್ದರು. ದೊಂಬಿ, ಗಲಭೆಗಳಿಂದಲೇ ರಾಜಕೀಯ ಅಸ್ತಿತ್ವ ಕಂಡುಕೊಂಡ ಬಿಜೆಪಿ ಇಂದು ಸಂವಿಧಾನ ವಿರೋಧಿಯಾದ ಬುಲ್ಡೋಸರ್ ವಿಕೃತಿಯ ಬಗ್ಗೆ ಮಾತಾಡುತ್ತಿರುವುದು ಹಾಸ್ಯಾಸ್ಪದ.
ಆರೋಪಿಗಳಾದವರ ಮನೆಯ ಮೇಲೆ ಬುಲ್ಡೋಸರ್ ಹತ್ತಿಸುವುದಾದರೆ ಕೆ.ಎಸ್.ಈಶ್ವರಪ್ಪ, ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ, ಸಿ.ಟಿ.ರವಿ ಅವರುಗಳಂತಹ ಬಿಜೆಪಿಗರ ಮನೆಗಳ ಮೇಲೆ ಹತ್ತಿಸಬೇಕು. ಅವರುಗಳು ಕಟ್ಟಿಕೊಂಡ ಅಕ್ರಮ ಸಾಮ್ರಾಜ್ಯ ಉರುಳಿಸಲು ಸಾವಿರಾರು ಬುಲ್ಡೋಸರ್ ಬೇಕಾಗಬಹುದು! ಸಮಾಜದ ಸ್ವಾಸ್ಥ್ಯ ಹಾಳುಮಾಡುವಲ್ಲಿ ಬಿಜೆಪಿಗರದ್ದೇ ಪ್ರಮುಖ ಪಾತ್ರವಿದೆ ಎಂದು ಕಾಂಗ್ರೆಸ್ ಟೀಕೆ ಮಾಡಿದೆ.
https://twitter.com/INCKarnataka/status/1517844363245940736?s=20&t=ZSWk86VomEpS8Rcf4xT6gQ
ಇದೇ ವೇಳೆ ಬೆಲೆ ಏರಿಕೆ ಬಗ್ಗೆ ಟ್ವೀಟ್ ಮಾಡಿ, ಅಭಿವೃದ್ಧಿಗೆ ಹಿನ್ನಡೆಯಾಗುವ ಬೆಲೆ ಏರಿಕೆ. ಕಬ್ಬಿಣ, ಸಿಮೆಂಟ್ ದರ ದಾಖಲೆ ಮಟ್ಟಕ್ಕೆ ಏರಿಕೆಯಾಗುತ್ತಿರುವುದನ್ನು ನೋಡಿಯೂ ಕಣ್ಮುಚ್ಚಿ ಕುಳಿತಿದೆ ಸರ್ಕಾರ. ಬೊಮ್ಮಾಯಿ ಅವರೇ, ನೆರೆಯಿಂದ ಮನೆ ಕಳೆದುಕೊಂಡವರಿಗೆ ಇನ್ನೂ ಸಹ ಪೂರ್ಣ ಹಣ ಬಿಡುಗಡೆ ಮಾಡದೆ ಕುಳಿತಿದ್ದೀರಿ, ಈಗ ನೀವು ಕೊಡುವ 5 ಲಕ್ಷಕ್ಕೆ ಮನೆಯ ತಳಪಾಯವೂ ಸಾಧ್ಯವಿಲ್ಲದಾಗಿದೆ ಎಂದು ವ್ಯಂಗ್ಯವಾಡಿದೆ.
https://twitter.com/INCKarnataka/status/1517844365921890305?s=20&t=ZSWk86VomEpS8Rcf4xT6gQ
ಇನ್ನು ಚಂದ್ರು ಹತ್ಯೆ ಸಂಬಂಧ ಟ್ವೀಟ್ ಮಾಡಿ, ಚಂದ್ರು ಹತ್ಯೆ ಪ್ರಕರಣ ಬೈಕ್ ಗಲಾಟೆಗೆ ನಡೆದಿದ್ದೇ ಹೊರತು ಭಾಷೆಯ ವಿಚಾರಕ್ಕಲ್ಲ ಎಂದು ಕೇಂದ್ರ ಗುಪ್ತಚರ ಇಲಾಖೆ ವರದಿ ನೀಡಿದೆ.ಸುಳ್ಳಿನ ಪಿತಾಮಹರಾದ ಬಿಜೆಪಿ ಬಣ್ಣ ಬಯಲಾಗಿದೆ. ಸುಳ್ಳು ಹೇಳಿ ಉಲ್ಟಾ ಹೊಡೆದಿದ್ದ ಗೃಹಸಚಿವರು, ಪೊಲೀಸ್ ಆಯುಕ್ತರೇ ಸುಳ್ಳು ಹೇಳಿದ್ದಾರೆ ಎಂದಿದ್ದ ಬಿಜೆಪಿ ನಾಯಕರು ಈಗ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದೆ. Bulldozer demolishes congress slams bjp