ಬುರ್ಜ್ ಖಲೀಫಾದಲ್ಲಿ ರಾರಾಜಿಸಿದ ಭಾರತದ ‘ತ್ರಿವರ್ಣ ಧ್ವಜ’
ದುಬೈ: ವಿಶ್ವದ ಅತಿ ಎತ್ತರದ ಕಟ್ಟಡ ದುಬೈನ ಬುರ್ಜ್ ಖಲೀಫಾ ಸೇರಿದಂತೆ ಪ್ರಮುಖ ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜ ರಾರಾಜಿಸಿದೆ. ಭಾರತದಾಲ್ಲಿ ಹೆಚ್ಚುತ್ತಿರುವ COVID-19 ಬಿಕ್ಕಟ್ಟಿನೊಂದಿಗೆ ಹೋರಾಡಲು ನಾವಿದ್ದೇವೆ ಎಂಬ ಸಂದೇಶವನ್ನ ಈ ಮೂಲಕ UAE ಸರ್ಕಾರ ರವಾನಿಸಿದೆ.
ದುಬೈನ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ತ್ರಿವರ್ಣ ಬೆಳಗಿದ್ದು, ಭಾರತದ ಜೊತೆಗೆ ನಾವಿದ್ದೇವೆ ಎಂದು UAE ಹೇಳಿದೆ. ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದ ವೀಡಿಯೊವನ್ನು ರಾಯಭಾರ ಕಚೇರಿಯು ಟ್ವೀಟ್ ಮಾಡಿ, ಭಾರತೀಯ ಧ್ವಜ ಮತ್ತು # ಸ್ಟೇಸ್ಟ್ರಾಂಗ್ ಇಂಡಿಯಾ ಎಂದು ಪ್ರದರ್ಶಿಸುತ್ತದೆ. ಇನ್ನೂ ಭಾರತದ ಮಿತ್ರ ರಾಷ್ಟ್ರಗಳ ಸಹ ಭಾರತದ ಪರ ಕೊರೊನಾ ಹೋರಟಾದಲ್ಲಿ ಎದೆ ತಟ್ಟಿ ನಿಲ್ಲಲು ಮುಂದಾಗಿವೆ. ಸಹಾಯಾಸ್ತ ಚಾಚಿವೆ.