Nayak Murder Case: ಇಂದು ಹೊರಬೀಳಲಿದೆ ರಾಜ್ಯದ ಮೊದಲ ಕೋಕಾ ಪ್ರಕರಣದ ತೀರ್ಪು

1 min read
Coca Case Saaksha Tv

ಇಂದು ಹೊರಬೀಳಲಿದೆ ರಾಜ್ಯದ ಮೊದಲ ಕೋಕಾ ಪ್ರಕರಣದ ತೀರ್ಪು

ಬೆಳಗಾವಿ: ಖ್ಯಾತ ಅದಿರು ಉದ್ಯಮಿ ಆರ್.ಎನ್.ನಾಯಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನರ ಪಾತಕಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

ರಾಜ್ಯದ ಮೊಲದ ಕೋಕಾ ಕೇಸ್ ಇದ್ದಾಗಿದ್ದು, ಬೆಳಗಾವಿಯ ಕೋಕಾ ನ್ಯಾಯಾಲಯ ಬೆಳಿಗ್ಗೆ 11 ಗಂಟೆಗೆ ತೀರ್ಪು ಪ್ರಕಟಿಸಲಿದೆ. ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 13 ಪಾತಕಿಗಳ ಭವಿಷ್ಯ ಇಂದು ನಿರ್ಧಾರವಾಗಲಿದ್ದು, ಘಟನೆ ನಡೆಎದು 9 ವರ್ಷಗಳ ನಂತರ ತೀರ್ಪು ಪ್ರಕಟವಾಗುತ್ತಿದೆ.

ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಕೆ.ಜಿ.ಪುರಾಣಿಕಮಠ ಅವರು ವಕಾಲತ್ತು ವಹಿಸಿದ್ದರು. ಈ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರತಾಪ್ ರೆಡ್ಡಿ, ಅಲೋಕ್ ಕುಮಾರ್, ಮಾಜಿ ಪೊಲೀಸ್ ಅಧಿಕಾರಿಗಳಾದ ಭಾಸ್ಕರ್ ರಾವ್, ಅಣ್ಣಾ ಮಲೈ ಸೇರಿ ಒಟ್ಟು 210 ಜನರು ಸಾಕ್ಷಿ ನುಡಿದಿದ್ದಾರೆ. 1,027 ದಾಖಲೆ ಪತ್ರಗಳು ಹಾಗೂ 138 ಮುದ್ದೆಮಾಲನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಪ್ರಕರಣ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ ಅದಿರು ಉದ್ಯಮಿ ಆರ್.ಎನ್.ನಾಯಕ್ ಶಿಕ್ಷಣ ಹಾಗೂ ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಈ ಕಾರಣಕ್ಕೆ ಬನ್ನಂಜೆ ರಾಜಾ, ಆರ್.ಎನ್.ನಾಯಕ್ ಅವರನ್ನು ಟಾರ್ಗೆಟ್ ಮಾಡಿದ್ದ. ವಿದೇಶದಲ್ಲಿ ಕುಳಿತುಕೊಂಡೇ ಬನ್ನಂಜೆ ರಾಜಾ ನಾಯಕರ ಬಳಿ ಹಣಕ್ಕೆ ಬೇಡಿಕೆ ಇಡುತ್ತಿದ್ದ.

ಅಲ್ಲದೇ ಹಫ್ತಾ ನೀಡದಿರುವುದಕ್ಕೆ 2013ರ ಡಿಸೆಂಬರ್ 21 ರಂದು ಆರ್.ಎನ್. ನಾಯಕ ಅವರನ್ನು ಹತ್ಯೆ ಮಾಡಲಾಗುತ್ತದೆ. ಉತ್ತರ ಪ್ರದೇಶ ಮೂಲದ ಶಾರ್ಪ್ ಶೂಟರ್ ವಿವೇಕ್ ಉಪಾಧ್ಯಾಯ ಎಂಬಾತ ಆರ್.ಎನ್. ನಾಯಕ ಅವರನ್ನು ಗುಂಡಿಕ್ಕಿ ಕೊಲೆಗೈಯುತ್ತಾನೆ. ಸ್ಥಳದಲ್ಲಿದ್ದ ಆರ್.ಎನ್ ನಾಯಕ ಅವರ ಗನ್​ ಮ್ಯಾನ್​​ ರಮೇಶ್ ಗೌಡ ಕೂಡ ವಿವೇಕ್ ಉಪಾಧ್ಯಾಯನನ್ನು ಅಟ್ಟಿಸಿಕೊಂಡು ಹೋಗಿ ಗುಂಡಿಕ್ಕಿ ಹತ್ಯೆ ಮಾಡುತ್ತಾನೆ.

ಘಟನೆ ನಡೆದ ಮರುದಿನವೇ ಕೆಲ ಮಾಧ್ಯಮಗಳಿಗೆ ಫೋನ್ ಮಾಡಿದ್ದ ಬನ್ನಂಜೆ ರಾಜಾ ಆರ್.ಎನ್ ನಾಯಕ ಅವರನ್ನು ಕೊಲೆ ಮಾಡಿಸಿದ್ದು ನಾನೇ ಎಂದು ಹೇಳಿಕೆ ನೀಡುತ್ತಾನೆ. ನಂತರ ಕರ್ನಾಟಕ ಪಶ್ಚಿಮ ವಲಯದ ಪೊಲೀಸರು ಬನ್ನಂಜೆ ರಾಜಾ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸುತ್ತಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd