camera in toilet -ಶಾಲಾ ಕಾಲೇಜುಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು ಶಿಕ್ಷಣ ಪಡೆಯ ಬೇಕಾದ ಮಕ್ಕಳು ಕೈಧಿಗಳಾಗುತ್ತಿರುವುದು ವಿಪರ್ಯಾಸ
ಬೆಂಗಳೂರಿನ ಹೊಸಕೆರೆಹಳ್ಳಿ ಹತ್ತಿರದ ಖಾಸಗಿ ಕಾಲೇಜಿನ ವಿದ್ಯಾರ್ಥಿ ಶುಭಂ ಎಂ ಆಜಾದ್ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ಅರೆನಗ್ನ ವಿಡಿಯೋ ಚಿತ್ರೀಕರಿಸಲು ರಹಸ್ಯ ಕ್ಯಾಮೆರಾ ಫಿಕ್ಸ್ ಮಾಡುತ್ತಿರುವಾಗ ಸಿಕ್ಕಿಬಿದ್ದಿದ್ದಾನೆ.
ಶುಭಂ ಬಿಬಿಎ ಐದನೇ ಸೆಮಿಸ್ಟರ್ ಓದುತ್ತಿದ್ದು ಈಗಾಗಲೇ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಫಿಕ್ಸ್ ಮಾಡಿದ್ದ 1200ಕ್ಕೂ ಅಧಿಕ ವಿಡಿಯೋ ಹಾಗೂ ಪೋಟೋ ಚಿತ್ರೀಕರಿಸಿದ್ದ ಎಂದು ತಿಳಿದು ಬಂದಿದೆ.
ಇದಷ್ಟೆ ಅಲ್ಲದೆ ಅವನೊಂದಿಗೆ ಸ್ನೇಹಿತೆಯರು ಜೊತೆಯಲ್ಲಿ ಇದ್ದಾಗಲು ಅವರ ಅರೆನಗ್ನ ಪೋಟೋ ತೆಗೆದಿರುವ ಆರೋಪ ಕೇಳಿ ಬಂದಿದೆ.
ಆದರೆ ಕೆಲದಿನಗಳ ಹಿಂದೆ ಕಾಲೇಜು ಶೌಚಾಲಯದಲ್ಲಿ ಕ್ಯಾಮೆರಾ ಇಡಲು ಹೋದಾಗ ಹುಡುಗಿಯರು ಕಿರುಚಾಡಿದಾರೆ ಈ ಸಂದರ್ಬದಲ್ಲಿ ಪರಾರಿಯಾಗಿದ್ದ ಈ ದೃಶ್ಯವು ಸಿಸಿಟಿವಿ ಪರಿಶೀಲನೆ ಮಾಡುವ ವೇಳೆ ತಿಳಿದು ಬಂದಿದೆ
ವಿಪರ್ಯಾಸ ಎಂದರೆ ಆರೋಪಿ ಶುಭಂ, ಈಗಾಗಲೆ ಒಂದು ಭಾರಿ ಈ ರೀತಿ ಹೀನಾಯ ಕೃತ್ಯ ಎಸಗುತ್ತಿರುವಾಗ ಸಿಕ್ಕಿಬಿದ್ದಿದ
ಆಗ ತಪ್ಪೋಪ್ಪಿಗೆ ಪತ್ರ ಬರೆದು ಕೊಟ್ಟಿದ್ದ ಆದ್ರೆ ಈ ಬಾರಿ ಘಟನೆ ಮರುಕಳಿಸಿದ ಕಾರಣ ಕಾಲೇಜು ಆಡಳಿತ ಮಂಡಲಿ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ .
ದೂರನ್ನು ಧಾಖಲಿಸಿಕೊಂಡ ಪೋಲಿಸರು ಆರೋಪಿಯನ್ನು ಬಂದಿಸಿ ವಿಚಾರಣೆ ನಡೆಸುತ್ತಿದ್ದು ಈ ವೇಳೆ ಆರೋಪಿಯ ಬಳಿ ಇನ್ನೊಂದು ಪೊನ್ ಇದ್ದು ಅದರಲ್ಲೂ ವಿಡಿಯೋ ಇರುವ ಶಂಕೆ ವ್ಯಕ್ತ ಪಡಿಸಿದ್ದಾರೆ.