ಹಾಸನ: ಕಾಡನೆ ದಾಳಿಗೆ ಅಂಬಾರಿ ಹೊರುವ ಕ್ಯಾಪ್ಟನ್ ಅರ್ಜುನ (Arjuna) ಸಾವನ್ನಪ್ಪಿದ ಘಟನೆ ನಡೆದಿದೆ.
ಜಿಲ್ಲೆಯ ಸಕಲೇಶಪುರ (Sakleshpura) ತಾಲೂಕಿನ ಯಸಳೂರು ಹತ್ತಿರ ಈ ಘಟನೆ ನಡೆದಿದೆ. ಕಾಡನೆಗಳನ್ನು ಸೆರೆ ಹಿಡಿಯುವುದಕ್ಕಾಗಿ ನಾಲ್ಕು ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿತ್ತು. ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವ ಸಂದರ್ಭದಲ್ಲಿ ಕಾಡಾನೆ, ಅರ್ಜುನನ ಮೇಲೆ ದಾಳಿ ನಡೆಸಿದೆ. ಆಗ ಇನ್ನುಳಿದ ಮೂರು ಆನೆಗಳು ಓಡಿ ಹೋಗಿವೆ. ಈ ಮಧ್ಯೆ ಎರಡೂ ಆನೆಗಳ ಮಧ್ಯೆ ಕಾಳಗ ಶುರುವಾಗಿದೆ. ಆ ಸಂದರ್ಭದಲ್ಲಿ ಅರ್ಜುನ ಸಾವನ್ನಪ್ಪಿದೆ. ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅರ್ಜುನ ದಸರಾ ಸಂದರ್ಭದಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದು, ಅಭಿಮಾನಿಗಳನ್ನು ಗಳಿಸಿತ್ತು. ಈಗ ಕಾರ್ಯಾಚರಣೆ ವೇಳೆ ಸಾವನ್ನಪ್ಪಿದೆ.