ದೀರ್ಘಕಾಲದಿಂದ ನಿರೀಕ್ಷೆಯಲ್ಲಿದ್ದ ಜಾತಿ ವಿವರಗಳ ಗಣತಿ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊನೆಗೂ ಸಂಪುಟ ಸಭೆಯಲ್ಲಿ ಇಂದು ಮಂಡಿಸಿದ್ದಾರೆ. ಹತ್ತು ವರ್ಷಗಳ ಹಿಂದೆಯೇ ಪ್ರಾರಂಭವಾದ ಈ ಪ್ರಕ್ರಿಯೆಗೆ ಇದೀಗ ಮರುಜೀವ ದೊರೆತಿದೆ.
ಈ ಮಹತ್ವದ ನಿರ್ಧಾರ ಬಿಜೆಪಿ ಮಾತ್ರವಲ್ಲದೆ, ಕೆಲವು ಕಾಂಗ್ರೆಸ್ ಶಾಸಕರ ವಿರೋಧದ ನಡುವೆಯೂ ನಡೆದಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವರದಿಯನ್ನು ಮಂಡಿಸಿದ ನಂತರ ಅದರ ಕುರಿತು ಚರ್ಚೆ ನಡೆಸಲಾಯಿತು. ನಂತರ ಇದನ್ನು ವಿಧಾನಸಭೆಯಲ್ಲಿ ಚರ್ಚೆಗೆ ಒಳಪಡಿಸಲಾಗುವ ನಿರೀಕ್ಷೆಯಿದೆ.
ಈ ವರದಿ ಸಾರ್ವಜನಿಕರ ಮನೆಗಳಿಗೆ ಹೋಗಿ ಸಮೀಕ್ಷೆ ನಡೆಸದೆ ತಯಾರಿಸಲಾಗಿದೆ ಎಂಬ ಕಾರಣದಿಂದಲೇ ಪ್ರತಿಪಕ್ಷಗಳು ಮತ್ತು ಕೆಲ ವಿಶ್ಲೇಷಕರು ವರದಿಯ ನಿಖರತೆ ಮತ್ತು ನೈತಿಕತೆಯ ಬಗ್ಗೆ ಗಂಭೀರವಾದ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.
ವಿವಿಧ ಜಾತಿಗಳ ಜನಸಂಖ್ಯೆ ವಿವರ ಮತ್ತು ಶಿಫಾರಸುಗಳು ಈ ವರದಿಯಲ್ಲಿ ಒಳಗೊಂಡಿರುವ ಸಾಧ್ಯತೆ ಇದೆ. ಇದರ ಪ್ರಕಟಣೆ ರಾಜ್ಯದ ರಾಜಕೀಯ ಸಮೀಕರಣಗಳ ಮೇಲೆ ಮಹತ್ತ್ವದ ಪ್ರಭಾವ ಬೀರುವ ನಿರೀಕ್ಷೆಯಿದೆ.
![{"remix_data":[],"source_tags":[],"total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false,"used_sources":{"version":1,"sources":[{"id":"435250766003211","type":"ugc"},{"id":"441845485021211","type":"ugc"},{"id":"289170894054211","type":"ugc"}]}}](https://saakshatv.com/wp-content/uploads/2025/04/Picsart_25-04-11_18-51-57-474-750x500.jpg)







