ಸಿಡಿ ಬಗ್ಗೆ ಮಾತಾಡಲ್ಲ ಎಲೆಕ್ಷನ್ ಮಾಡೋಣ : ಡಿ.ಕೆ.ಶಿವಕುಮಾರ್
ಬೆಳಗಾವಿ : ಸಿಡಿ ಬಗ್ಗೆ ಮಾತಾಡಲ್ಲ ಎಲೆಕ್ಷನ್ ಮಾಡೋಣ ಎಂದು ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರು ತಳುಕು ಹಾಕಿಕೊಂಡಿರುವ ಬೆನ್ನಲ್ಲೆ ಟ್ರಬಲ್ ಶೂಟರ್ ಬೆಳಗಾವಿಗೆ ಭೇಟಿ ನೀಡಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಯಾವುದು ಶಾಶ್ವತವಲ್ಲ. ರಮೇಶ್ ಜಾರಕಿಹೊಳಿ ಅವರು ದಿನಕ್ಕೊಂದು ಮಾತನಾಡುತ್ತಾರೆ.
ಏನ್ ಏನೋ ಮಾತನಾಡುತ್ತಾರೆ ಅವರ ಸುದ್ದಿಯನ್ನು ಬಿಟ್ಟು ಬಿಡಿ. ಎಲ್ಲರಿಗೂ ಒಳ್ಳೆಯದಾಗಲಿ. ಪಾಪ ಅವರ ಬಗ್ಗೆ ನಾನು ಏನ್ ಮಾತನಾಡಲಿ ಎಂದು ಹೇಳಿದ್ದಾರೆ.
ನಾನು ಸಿಡಿಯ ಕುರಿತಾಗಿ ಮಾತನಾಡಲ್ಲ ಆ ಸುದ್ದಿಯನ್ನು ಬಿಟ್ಟು ಬಿಡಿ. ಚುನಾವಣೆ ಮುಖ್ಯ ನಮಗೆ ಮೊದಲು ಎಲೆಕ್ಷನ್ ಮಾಡೋಣ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇನ್ನು ನನ್ನ ಕೆಲಸವನ್ನು ನಾನು ಮಾಡುತ್ತಿದ್ದೇನೆ. ನಮ್ಮ ಪಕ್ಷವನ್ನು ಸೇರಿಕೊಳ್ಳಲು ಹಲವರು ಮುಂದೆ ಬರುತ್ತಿದ್ದಾರೆ. ಎಲ್ಲಾ ಕಾರ್ಯಕರ್ತರು ಸೇರಿಕೊಳ್ಳಿ ಪಕ್ಷವನ್ನು ಕಟ್ಟಿ.
ಪಕ್ಷದ ಕಾರ್ಯಕರ್ತರು ಒಟ್ಟಾಗಿ ಚುನಾವಣೆ ಮಾಡಿ. ಸತೀಶ್ ಅವರಿಗೆ ಒಳ್ಳೆಯ ನಾಯಕತ್ವದ ಗುಣವಿದೆ ಎಂದು ಸತೀಶ್ ಹೇಳಿದ್ರು.
