ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಸದ್ಯ ಸ್ವಂತ ಮನೆ ಹೊಂದುವ ಮಧ್ಯ ಮವರ್ಗದವರಿಗೆ ಹೊಸ ಸೋಜನೆಯನ್ನು ಘೋಷಿಸಲಾಗಿದೆ.
ಪಿಂಚಣಿ ಯೋಜನೆ, ರೈತರಿಗಾಗಿ ಪಿಎಂ ಕಿಸಾನ್ ಯೋಜನೆ, ಮಹಿಳೆಯರು ಮತ್ತು ಸಮಾಜದ ಇತರ ವರ್ಗಗಳಿಗೆ ಅದ್ಭುತ ಯೋಜನೆಗಳನ್ನು ಘೋಷಿಸಲಾಗಿದ್ದು, ಸದ್ಯ ಸ್ವಂತ ಮನೆ ಹೊಂದುವ ಮಧ್ಯಮ ವರ್ಗದ ಜನರ ಕನಸು ನನಸಾಗಿದೆ. ಕೇಂದ್ರವು ಮತ್ತೊಂದು ಹೊಸ ಯೋಜನೆಯನ್ನು ಆರಂಭಿಸಲು ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಸಚಿವ ಹರ್ದೀಪ್ ಸಿಂಗ್ ಹೇಳಿದ್ದಾರೆ.
ಸರ್ಕಾರವು ಬಡ್ಡಿ ಸಹಾಯಧನ ಯೋಜನೆಯ ವಿವರಗಳನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಇದ್ದಾರೆ. ನಾವು ಹೊಸ ಹೋಮ್ ಸಬ್ಸಿಡಿ ಯೋಜನೆಯ ವಿವರಗಳನ್ನು ಅಂತಿಮಗೊಳಿಸುವ ಪ್ರಕ್ರಿಯ ನಡೆಯುತ್ತಿದೆ. ಪ್ರಧಾನಿ ತಿಳಿಸಿದಂತೆ ಇದೊಂದು ದೊಡ್ಡ ಯೋದಜನೆ, ಇದು ಒಂದಲ್ಲ ಒಂದು ರೂಪದಲ್ಲಿ ಬಡ್ಡಿ ಸಹಾಯಧನ ಒದಗಿಸುತ್ತದೆ. ಯೋಜನೆಯ ಅಂತಿಮ ವಿವರಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.
5 ವರ್ಷಗಳಲ್ಲಿ ಸಣ್ಣ ಪಟ್ಟಣಗಳ ವಸತಿಗಾಗಿ ಸಬ್ಸಿಡಿ ಸಾಲಗಳನ್ನು ಒದಗಿಸಲು ಭಾರತವು 600 ಬಿಲಿಯನ್ ರೂ.ಗಳನ್ನು ಖರ್ಚು ಮಾಡಲು ಯೋಜಿಸುತ್ತಿದೆ. ಈ ವರ್ಷದ ಕೊನೆಯಲ್ಲಿ ನಿರ್ಣಾಯಕ ರಾಜ್ಯ ಚುನಾವಣೆಗಳು ಇರುವ ಹಿನ್ನೆಲೆಯಲ್ಲಿ ಬ್ಯಾಂಕ್ ಗಳು ಎರಡು ತಿಂಗಳೊಳಗೆ ಈ ಯೋಜನೆ ಜಾರಿಗೆ ತರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಬಾಡಿಗೆ ವಸತಿ, ಬಾಡಿಗೆ ಕಾಲೋನಿಗಳಲ್ಲಿ ವಾಸಿಸುವ ಮಧ್ಯಮ ವರ್ಗದ ಕುಟುಂಬಗಳಿಗೆ ಈ ಯೋಜನೆ ಘೋಷಿಸಿದ್ದಾರೆ.