ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ರಾಜ್ಯ ವಕ್ತಾರ ಎಂ. ಲಕ್ಷ್ಮಣ್ ಕೇಂದ್ರ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. ಅವರು ಖಾಲಿ ಚೆಂಬು ಮತ್ತು ತೆಂಗಿನ ಚಿಪ್ಪುಗಳನ್ನು ಪ್ರದರ್ಶಿಸಿ, ಕೇಂದ್ರ ಸರ್ಕಾರವು ರಾಜ್ಯದ ಅಭಿವೃದ್ಧಿಗೆ ಯಾವುದೇ ಪ್ರಯೋಜನಕಾರಿ ಯೋಜನೆಗಳನ್ನು ನೀಡದೆ ಖಾಲಿ ಭರವಸೆ ನೀಡಿದೆ ಎಂದು ವ್ಯಂಗ್ಯವಾಡಿದ್ದಾರೆ.
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯವಾಡಿದ ಕಾಂಗ್ರೆಸ್ ಮುಖಂಡ
ಮೂರು ನಾಮ ಬಳಿದ ಚೆಂಬುಗಳನ್ನು ಹಿಡಿದುಕೊಂಡು, “ಗೋವಿಂದ, ಗೋವಿಂದಾ” ಎಂದು ಧ್ವನಿಗೋಡಿಸಿ ಅವರು ಕೇಂದ್ರ ಸರ್ಕಾರದ ಬಜೆಟ್ ವಿರೋಧಿಸಿದರು. ಕೇಂದ್ರ ಸರ್ಕಾರ 205 ಲಕ್ಷ ಕೋಟಿ ಸಾಲ ಮಾಡಿದೆ, ಇದರಿಂದ ದೇಶದ ಪ್ರತಿಯೊಬ್ಬರ ತಲೆಯ ಮೇಲೆ ಮೂರು ಲಕ್ಷ ಸಾಲ ಬಂದಿದೆ. 12 ಲಕ್ಷದವರೆಗೆ ತೆರಿಗೆ ವಿನಾಯಿತಿ ಎಷ್ಟು ಜನರಿಗೆ ಪ್ರಯೋಜನವಿದೆ? ಎಂದು ಪ್ರಶ್ನೆ ಎತ್ತಿದರು.
ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯ: ಕೆಪಿಸಿಸಿ ಆರೋಪ
ರಾಜ್ಯದಿಂದ 5 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗುತ್ತದೆ. ಆದರೆ, 42 ಪರ್ಸೆಂಟ್ ವಾಪಸ್ ನೀಡುವ ನಿಯಮವನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿಲ್ಲ, ಎಂದು ಎಂ. ಲಕ್ಷ್ಮಣ್ ಕಿಡಿಕಾರಿದರು. 19 ಎಂಪಿಗಳು ಮತ್ತು 4 ಕೇಂದ್ರ ಸಚಿವರು ಇದ್ದರೂ ರಾಜ್ಯಕ್ಕೆ ಅಗತ್ಯವಿರುವ ಯೋಜನೆಗಳ ಬಗ್ಗೆ ಚರ್ಚೆ ನಡೆಸಲು ಯಾರೂ ಮುಂದೆ ಬಂದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕುಮಾರಸ್ವಾಮಿಗೆ ತಿರುಗೇಟು
ಸಿಎಂ ಸಿದ್ದರಾಮಯ್ಯ ಡಿಸೆಂಬರ್ ತಿಂಗಳಲ್ಲಿ 30 ಬೇಡಿಕೆಗಳ ಪಟ್ಟಿಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಲ್ಲಿಸಿದ್ದರು. ಆದರೆ ಕುಮಾರಸ್ವಾಮಿ ‘ಹಿಟ್ ಅಂಡ್ ರನ್’ ಅಪ್ರಬುದ್ಧ ರಾಜಕಾರಣಿ, ಎಂದು ಅವರು ಟೀಕಿಸಿದ್ದಾರೆ.