ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಪ್ರಕಟಿಸಿರುವ ಸಿಇಟಿ 2025 (ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ) ಸಂಬಂಧಿತ ಮಹತ್ವದ ಪ್ರಕಟಣೆಯೊಂದರಲ್ಲಿ, ಇಂಜಿನಿಯರಿಂಗ್, ಯೋಗ ಮತ್ತು ನ್ಯಾಚುರೋಪತಿ, ಬಿ.ಫಾರ್ಮ, ಫಾರ್ಮ ಡಿ, ಕೃಷಿ ವಿಜ್ಞಾನ ಕೋರ್ಸ್, ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್ ಕೋರ್ಸ್ಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ತಿದ್ದುಪಡಿ (Correction) ಮಾಡಲು ಅವಕಾಶ ನೀಡಲಾಗಿದೆ.
ಅರ್ಜಿಯ ವೇಳೆ ತಪ್ಪಾಗಿ ನಮೂದಿಸಿದ ಮೀಸಲಾತಿ (Reservation), ವಿಶೇಷ ಪ್ರವರ್ಗ (Special Category), ಹಾಗೂ ಶೈಕ್ಷಣಿಕ ವಿವರಗಳನ್ನು ತಿದ್ದುಪಡಿ ಮಾಡಲು 2025ರ ಏಪ್ರಿಲ್ 18ರಿಂದ ಆರಂಭವಾಗಿ ಮೇ 2ರವರೆಗೆ ಅವಕಾಶ ನೀಡಲಾಗಿದೆ.
ಅಭ್ಯರ್ಥಿಗಳು KEA ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ತಮ್ಮ ದಾಖಲಾತಿಗಳನ್ನು ಪರಿಶೀಲಿಸಿ, ಯಾವುದೇ ತಪ್ಪುಗಳಿದ್ದರೆ ಅವುಗಳನ್ನು ಸರಿಪಡಿಸಿಕೊಳ್ಳಬಹುದು. ಇದೊಂದು ಅಂತಿಮ ತಿದ್ದುಪಡಿ ಅವಕಾಶವಾಗಿರುವ ಕಾರಣ, ಯಾವುದೇ ಜವಾಬ್ದಾರಿಯನ್ನು ಪ್ರಾಧಿಕಾರ ಹೊತ್ತುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಅಭ್ಯರ್ಥಿಗಳಿಗೆ ಸೂಚನೆ:
ತಿದ್ದುಪಡಿ ಮಾಡುವ ಮುನ್ನ ಸಲ್ಲಿಸಿದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿ.
ತಿದ್ದುಪಡಿಯ ನಂತರದ ಮಾಹಿತಿ ಎಂಟ್ರಿಗೆ ಮತ್ತೊಂದು ಅವಕಾಶ ಇರುವುದಿಲ್ಲ.
ತಿದ್ದುಪಡಿ ಪೂರೈಸಿದ ಬಳಿಕ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಸೇವ್ ಮಾಡಿಕೊಳ್ಳಿ.
ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು kea.kar.nic.in ಎಂಬ ವೆಬ್ಸೈಟ್ಗೆ ಲಾಗಿನ್ ಮಾಡಬಹುದು.