Crime: ಮಹಿಳೆಯ ಸರ ಕದ್ದು ಕ್ಷಣಾರ್ಧದಲ್ಲಿ ಪರಾರಿಯಾದ ಸರಗಳ್ಳರು
1 min read
ಮಹಿಳೆಯ ಸರ ಕದ್ದು ಕ್ಷಣಾರ್ಧದಲ್ಲಿ ಪರಾರಿಯಾದ ಸರಗಳ್ಳರು
ಬೀದರ: ಮಹಿಳೆಯೊಬ್ಬರು ಸರ ಕದ್ದು ಕ್ಷಣಾರ್ಧದಲ್ಲಿ ಸರಗಳ್ಳರು ಪರಾರಿಯಾದ ಘಟನೆ ಜಿಲ್ಲೆಯ ಪ್ರತಾಪ್ ನಗರದಲ್ಲಿ ನಡೆದಿದೆ.
ಪ್ರತಾಪ ನಗರದ ನಿವಾಸಿ ಶ್ರೀದೇವಿ ಅವರು ಅಂಗಡಿಯಿಂದ ಹಾಲು ಖರೀದಿಸಿಕೊಂಡು ಬರುವಾಗ ಬೈಕ್ನಲ್ಲಿ ಬಂದ ಖದೀಮರು ಮಹಿಳೆಯ ಕತ್ತಿನಲ್ಲಿದ್ದ ಸರ ಕದ್ದು ಪರಾರಿಯಾಗಿದ್ದಾರೆ.
ಮಹಿಳೆಯ ಚಿನ್ನದ ಸರ ಕದ್ದು ಖದೀಮರು ಎಸ್ಕೇಪ್ ಆಗುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಚಿನ್ನದ ಸರ ಎಗರಿಸಿದ ರಭಸಕ್ಕೆ ಮಹಿಳೆ ರಸ್ತೆ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.
ಸಧ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಂಭೀರವಾಗಿ ಗಾಯಗೊಂಡ ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಕುರಿತು ನ್ಯೂ ಟೌನ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದಲ್ಲಿ ಸರಗಳ್ಳರ ಹಾವಳಿಗೆ ಮಹಿಳೆಯರು ಬೆಚ್ಚಿ ಬಿದ್ದಿದ್ದಾರೆ.