ಮಹಿಳೆಯರಿಗೆ ಕಂಟಕವಾಗಿದ್ದ ಸರಗಳ್ಳರ ಬಂಧನ
ಬೆಂಗಳೂರು: ನಗರದಲ್ಲಿ ಬೀಡುಬಿಟ್ಟಿದ್ದ ನಾಲ್ವರು ಸರಗಳ್ಳರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆಸಿಫ್ ಹುಸೇನ್, ಅಪ್ಸರ್ ಅಹಮ್ಮದ್, ಅಸ್ಗರ್ ಮಾದಿ ಹಾಗೂ ತೌಸಿಫ್ ಬಂಧಿತ ಆರೋಪಿಗಳು. ಇವರು ನಗರದ ಬೇರೆ ಬೇರೆ ಏರಿಯಾಗಳಲ್ಲಿ ಸರಗಳ್ಳತನ ಮಾಡುತ್ತಿದ್ದು. ಸರಗಳ್ಳತನ ಮಾಡಲು ವೃದ್ಧೆಯರನ್ನು ಟಾರ್ಗೇಟ್ ಮಾಡುತ್ತಿದ್ದಾರು.
ಆರೋಪಿಗಳು ಮೊದಲು ಏರಿಯಾಗಳಲ್ಲಿ ರೌಂಡ್ ಹಾಕುತ್ತಿದ್ದರು. ಏರಿಯಾದಲ್ಲಿರುವ ಪಾರ್ಕ್ ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಗಮನಿಸಿ, ಅಲ್ಲಿಗೆ ಬರುವ ಮಹಿಳೆಯರನ್ನು, ವೃದ್ಧೆಯರನ್ನು ಗಮನಿಸುತ್ತಿದ್ದರು. ಸರಗಳತನ ಮಾಡಿ ಎಸ್ಕೆಪ್ ಆಗಲು ಪ್ಲ್ಯಾನ್ ಸಹ ಮಾಡುತ್ತಿದ್ದರು.
ಇವರು ಪಾರ್ಕ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವ ಮಹಿಳೆಯರನ್ನು ಮತ್ತು ವೃದ್ಧೆಯರನ್ನು ಟಾರ್ಗೆಟ್ ಮಾಡಿ, ಪಲ್ಸರ್ ಬೈಕ್ ಹಾಗೂ ಡಿಯೋ ಬೈಕ್ಗಳಲ್ಲಿ ಬಂದು ಸರಗಳ್ಳತನ ಮಾಡುತಿದ್ದರು. ಕೃತ್ಯವೆಸಗಿದ ಮಾರ್ಗ ಮಧ್ಯೆ ಬೈಕ್ನಲ್ಲೇ ಬಿಡುತ್ತಿದ್ದರು.
ಈ ಸೂಕ್ತ ಮಾಹಿತಿ ಪಡೆದ ಸಿಸಿಬಿ ಇನ್ಸ್ಪೆಕ್ಟರ್ ಹಜರೇಶ್ ಮತ್ತು ತಂಡ ಸರಗಳ್ಳರನ್ನು ಬಂಧಿಸಿ 10ಕ್ಮೂ ಹೆಚ್ಚು ಪ್ರಕರಣಗಳನ್ನ ಪತ್ತೆ ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ 25 ಲಕ್ಷ ಬೆಲೆ ಬಾಳುವ 490 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರ ವಿರುದ್ಧ ವಿವಿಧ ಅಪರಾಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.