ಚೀನಾದಲ್ಲಿ ಮಿಲಿಟರಿ ಸಿಬ್ಬಂದಿ ಅವಹೇಳನ ನಿಷೇಧಿಸಿ ಮಸೂದೆ ಅಂಗೀಕಾರ..!
ಚೀನಾ : ಚೀನಾದಲ್ಲಿ ಹೇಳಿ ಕೇಳಿ ಅಲ್ಲಿನ ಸರ್ಕಾರ ಮಿಲಿಟರಿ ಪಡೆ ಮೇಲೆ ಹೆಚ್ಚು ಗಮನ ವಹಿಸುತ್ತೆ.. ಅದು ಅಲ್ಲದೇ ಅಪ್ಪಿ ತಪ್ಪಿ ಚೀನಾದ ಸೇನೆಯನ್ನ ಯಾರಾದರೂ ಅವಹೇಳನ ಮಾಡಿದ್ರೆ ಅಂತಹವರಿಗೆ ಅಲ್ಲಿ ಉಳಿಗಾಲವಿಲ್ಲ. ಅದು ಇತ್ತೀಚೆಗೆ ಸಾಬೀತಾಗಿತ್ತು..
ಪೂರ್ವ ಲಡಾಖ್ನ ಗಡಿಯಲ್ಲಿರುವ ಗಾಲ್ವನ್ ಕಣಿವೆಯಲ್ಲಿ ನಡೆದ ಸಂಘರ್ಷದ ವೇಳೆ, ಭಾರತದ ಯೋಧರು ಚೀನಾದ ಸೈನಿಕರನ್ನು ಹತ್ಯೆ ಮಾಡಿದ್ದರು. ಇದನ್ನು ಮೊದಲು ಒಪ್ಪದಿದ್ದ ಚೀನಾ, ನಂತರ ತನ್ನ ನಾಲ್ವರು ಸೈನಿಕರು ಹತ್ಯೆಯಾಗಿದ್ದಾರೆ ಎಂದಿತ್ತು. ಈ ಬಗ್ಗೆ ಚೀನಾದ ಖ್ಯಾತ ಬ್ಲಾಗರ್ವೊಬ್ಬರು ಬರೆದಿದ್ದ ಲೇಖನ ಸೈನಿಕರನ್ನು ಅವಮಾನಿಸಿದೆ ಎಂದು ಕಿಡಿಕಾರಿದ್ದ ಕಮ್ಯುನಿಸ್ಟ್ ಸರ್ಕಾರ, ಬ್ಲಾಗರ್ಗೆ ಶಿಕ್ಷೆ ವಿಧಿಸಿತ್ತು.
ಇದೀಗ ಮಿಲಿಟರಿ ಸಿಬ್ಬಂದಿಯನ್ನು ಅವಮಾನಿಸುವುದನ್ನು ನಿಷೇಧಿಸುವ ಮಸೂದೆಗೆ ಚೀನಾ ಅನುಮೋದನೆ ನೀಡಿದೆ. ಚೀನಾದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ನ (ಎನ್ಪಿಸಿ) ಸ್ಥಾಯಿ ಸಮಿತಿ ಮಂಡಿಸಿದ ಈ ಮಸೂದೆಗೆ ಅನುಮೋದನೆ ನೀಡಲಾಗಿದೆ.
ಯಾವುದೇ ವ್ಯಕ್ತಿ ಅಥವಾ ಸಂಘಟನೆ ಯಾವುದೇ ರೀತಿಯಲ್ಲಿ ಮಿಲಿಟರಿ ಸಿಬ್ಬಂದಿಯನ್ನು ಅವಮಾನಿಸುವುದನ್ನು, ಅವರ ಗೌರವಕ್ಕೆ ಧಕ್ಕೆ ತರುವುದನ್ನು ಈ ಮಸೂದೆ ನಿಷೇಧಿಸುತ್ತದೆ ಎಂದು ಸರ್ಕಾರಿ ಒಡೆತನದ ಸುದ್ದಿಸಂಸ್ಥೆ ಷಿನ್ಹುವಾ ವರದಿ ಮಾಡಿದೆ. ಮಿಲಿಟರಿ ಸಿಬ್ಬಂದಿಗೆ ಗೌರವಾರ್ಥವಾಗಿ ನೀಡಿರುವ ಪದಕಗಳನ್ನು ಅವಮಾನಿಸುವುದನ್ನು ಸಹ ಹೊಸ ಮಸೂದೆ ನಿಷೇಧಿಸುತ್ತದೆ. ಈಗಾಗಲೇ ಜಾರಿಯಲ್ಲಿದ್ದ ಕಾಯ್ದೆಯನ್ನು ಈ ಮಸೂದೆ ಮೂಲಕ ಮತ್ತಷ್ಟು ಕಠಿಣಗೊಳಿಸಲಾಗಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.