ಕಪಟಿ ಚೀನಾ – ಉಗ್ರತಾಣ ಪಾಕಿಸ್ತಾನದ ದೋಸ್ತಿ ಕೊನೆಯಾಗುತ್ತಾ..? ಇದಕ್ಕೆ ಅಮೆರಿಕಾ ಕಾರಣವಾಗುತ್ತಾ..?
ಭಾರತದ ಬದ್ಧ ವೈರಿ ರಾಷ್ಟ್ರ… ಉಗ್ರರ ತಾಣ… ಬಿಕಾರಿ ರಾಷ್ಟ್ರವೆಂಬ ಕುಖ್ಯಾತಿಗಳಿಸಿ , ಚೀನಾದ ಹಂಗಲ್ಲಿ ಬದುಕುತ್ತಿರುವ ಚೀನಾದ ಗುಲಾಮ ರಾಷ್ಟ್ರ ಪಾಕಿಸ್ತಾನಕ್ಕೆ ಸದ್ಯ ಕಪಟಿ ಚೀನಾದ ಬೆಂಬಲಿದೆ.. ಹೀಗಾಗಿ ಚೀನಾ ಏನೇ ಮಾಡಿದ್ರು, ರೈಟ್, ಏನೇ ಹೇಳಿದ್ರೂ ಅದೇ ಅಂತ ಎಲ್ಲದಕ್ಕೂ ಕೋಲೆ ಬಸವನಂತೆ ತಲೆ ಆಡಿಸುವ ಪಾಕಿಸ್ತಾನಕ್ಕೆ ಚೀನಾ ಬಿಟ್ಟರೆ ಬೇರೆಯಾವ ದೇಶಗಳು ಆಸರೆಯಾಗೋದಿಲ್ಲ..
ಆ ದೇಶದ ಆರ್ಥಿಕ ಪರಿಸ್ಥಿತಿ ಇಂದು ಯಾವ ಮಟ್ಟಕ್ಕೆ ಕುಸಿದಿದೆ ಅನ್ನೋ ವಿಚಾರವೂ ಎಲ್ರಿಗೂ ಗೊತ್ತೇ ಇದೆ.. ಕತ್ತೆಗಳನ್ನ ಹರಾಜು ಹಾಕುವ ಪರಿಸ್ಥಿತಿಗೆ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ತಲುಪಿದ್ರು ಅನ್ನೋದನ್ನ ಮರೆಯೋಹಾಕಿಲ್ಲ.. ಅಂದ್ಹಾಗೆ ಉಗ್ರರ ನೆಲೆ ಬೀಡು ಪಾಕಿಸ್ತಾನಕ್ಕೆ ಭಾರತದ ಮತ್ತೊಂದು ವೈರಿ ರಾಷ್ಟ್ರವಾಗಿ ಇತ್ತೀಚಿನ ದಿನಗಳಲ್ಲಿ ಗುರುತಿಸಿಕೊಳ್ತಿರುವ ಚೀನಾ ಅಷ್ಟೋ ಇಷ್ಟೋ ಸಹಾಯ ಮಾಡುತ್ತಾ ಪಾಕಿಸ್ತಾನವನ್ನ ತನ್ನ ಗುಲಾಮ ದೇಶವನ್ನಾಗಿಸಿಕೊಂಡಿದೆ.. ಚೈನಾ ಏನೇ ಹೇಳುದ್ರೂ ಎದುರು ಮಾತನಾಡದೇ ಒಪ್ಪಿಕೊಳ್ಳಲೇ ಬೇಕಾದ ಪರಿಸ್ಥಿತಿಗೆ ಬoದಿದೆ..
ಇದೀಗ ಪಾಕಿಸ್ತಾನ ಚೀನಾ ಜೊತೆ ಒಳ್ಳೆ ಫ್ರೆಂಡ್ಶಿಪ್ ಹೊಂದಿರೋದಕ್ಕೆ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ಒತ್ತಡ ಹೇರುತ್ತಿವೆ ಅಂತ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಚೀನೀ ಸರ್ಕಾರಿ ಮಾಧ್ಯಮ ಚೈನಾ ಗ್ಲೋಬಲ್ ಟೆಲಿವಿಷನ್ ನೆಟ್ವರ್ಕ್ಗೆ ಕೊಟ್ಟಿರೋ ಒಂದು ಇಂಟರ್ವ್ಯೂನಲ್ಲಿ ಚೀನಾಗೆ ಬಕೆಟ್ ಹಿಡಿದಿದಿದ್ದಾರೆ. ಬಕೆಟ್ ಏನು ದೊಡ್ಡ ಹಂಡೇನೇ ಹಿಡಿದಿದ್ದಾರೆ. ನಾವು ಚೀನಾ ಜೊತೆ ಕ್ಲೋಸ್ ಆಗಿರೋದಕ್ಕೆ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳಿಂದ ಒತ್ತಡದ ಅನುಭವವಾಗ್ತಿದೆ.
ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳಿಗೆ ಚೀನಾ ಜೊತೆ ಸಂಘರ್ಷ ಇದೆ. ಹೀಗಾಗಿ ನಮ್ಮಂತ ದೇಶಗಳಿಗೆ ನಮ್ ಜೊತೆ ಸೇರ್ಕೊಳಿ ಅಂತ ಒತ್ತಡ ಹೇರ್ತಿದ್ದಾರೆ. ಆದ್ರೆ ಇದು ಸರಿಯಲ್ಲ. ನಾವು ಯಾರ ಪಕ್ಷ ಯಾಕೆ ಸೇರ್ಬೇಕು. ಆದ್ರೆ ಪಾಕಿಸ್ತಾನ ಮತ್ತು ಚೀನಾದ ಸಂಬಂಧವನ್ನು ಹಾಳು ಮಾಡುವ ಯಾವ ಒತ್ತಡವೂ ಫಲ ನೀಡೋದಿಲ್ಲ.
ಯಾವ ಒತ್ತಡಕ್ಕೂ ನಾವು ಕೇರ್ ಮಾಡಲ್ಲ ಅಂತ ಹೇಳಿದ್ದಾರೆ. ಅದೇ ರೀತಿ ಭಾರತದ ಹೆಸರು ಹೇಳದೇ ಮಾತನಾಡಿರೋ ಇಮ್ರಾನ್ ಖಾನ್, ನಮ್ಮ ನೆರೆ ದೇಶದ ಜೊತೆಗೆ ಯಾವಾಗ ಕಿರಿಕ್ ಆದ್ರೂ ಚೀನಾ ನಮ್ಮ ಪರವಾಗಿ ನಿಲ್ಲುತ್ತೆ ಅಂತ ಹೇಳಿಕೊಂಡಿದ್ದಾರೆ.