ಚಲ್ತಾ ಹೇ.. ಆಟಿಟ್ಯೂಡ್ ಸಹಿಸೋದಿಲ್ಲ : ಸಿಎಂ ಸ್ವೀಟ್ ವಾರ್ನಿಂಗ್
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಮೊದಲ ಸುದ್ದಿಗೋಷ್ಠಿಯಲ್ಲಿ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಚಲ್ತಾ ಹೇ.. ಆಟಿಟ್ಯೂಡ್ ಸಹಿಸೋದಿಲ್ಲ, ಏನೇ ಮಾಡಿದ್ರೂ ನಡೆಯುತ್ತೆ ಅಂದ್ಕೋಬೇಡಿ. ಚಲ್ತಾ ಹೇ ಆಟಿಟ್ಯೂಡ್ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಅಧಿಕಾರಿಗಳಿಗೆ ನೂತನ ಮುಖ್ಯಮಂತ್ರಿಗಳು ಎಚ್ಚರಿಕೆ ಕೊಟ್ಟಿದ್ದಾರೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿಯಾದ ಬಳಿಕ ಮೊದಲ ಸುದ್ದಿಗೋಷ್ಠಿ ನಡೆಸಿದ ಬೊಮ್ಮಾಯಿ, ಪೂರ್ಣ ಪ್ರಮಾಣದಲ್ಲಿ ಸಚಿವ ಸಂಪುಟ ರಚನೆಯಾಗಿಲ್ಲ. ನಾನೊಬ್ಬನೇ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ಆದರೂ ಆಡಳಿತದಲ್ಲಿ ಯಾವುದೇ ಕೆಲಸಗಳು ನಿಲ್ಲುವುದಿಲ್ಲ ಎಂದು ತಿಳಿಸಿದರು. ಅನಗತ್ಯ ಖರ್ಚು ಕಡಿಮೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಫೈಲ್ ಕ್ಲಿಯರೆನ್ಸ್ ಡ್ರೈವ್ ಮಾಡಲು ನಿರ್ಧರಿಸಿದ್ದೇವೆ. ಎಲ್ಲ ಇಲಾಖೆ ಅಧಿಕಾರಿಗಳು ಫೈಲ್ ಕಳಿಸುತ್ತಾರೆ. ಕನಿಷ್ಠ 15 ದಿನದೊಳಗೆ ಎಲ್ಲ ಫೈಲ್ ಕ್ಲಿಯರ್ ಆಗಬೇಕು. ಹೊಸ ದಿಕ್ಸೂಚಿಯಿಂದ ಆಡಳಿತದಲ್ಲಿ ದಕ್ಷತೆ ತರುತ್ತೇವೆ. ಜನಸಾಮಾನ್ಯರಿಗೆ ಎಲ್ಲ ಕಾರ್ಯಕ್ರಮಗಳು ತಲುಪುತ್ತವೆ. ನಿಗದಿತ ಸಮಯದಲ್ಲಿ ಕಾರ್ಯಕ್ರಮ ತಲುಪುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಅಧಿಕಾರಿಗಳಿಗೆ ವಾರ್ನಿಂಗ್ ನೀಡಿದ ಬೊಮ್ಮಾಯಿ, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಧೋರಣೆ ಸಹಿಸಲ್ಲ. ಈ ಹಿಂದಿನಂತೆ ಏನೇ ಮಾಡಿದ್ರು ನಡೆಯುತ್ತೆ ಅಂದುಕೊಂಡಿದ್ರೆ ಆಗಲ್ಲ ಎಂದು ಸ್ವೀಟ್ ವಾರ್ನಿಂಗ್ ನೀಡಿದರು.
ಮುಂದುವರೆದು ಕೆಲವೊಂದು ಘೋಷಣೆಗಳನ್ನು ಮಾಡಿದ ಬೊಮ್ಮಾಯಿ, ರೈತರ ಮಕ್ಕಳಿಗೆ ಶಿಷ್ಯ ವೇತನ, ಸಂದ್ಯಾ ಸುರಕ್ಷಾ ಯೋಜನೆಯ ಫಲಾನುಭವಿಗಳಿಗೆ ರೂ.1,000ದಿಂದ ರೂ.1,200ಕ್ಕೆ ಹೆಚ್ಚಳ. ವಿಧವಾ ವೇತನ ಹಾಲಿ ಇರುವಂತ 600 ರೂ ಗಳನ್ನು 800ಕ್ಕೆ ಹೆಚ್ಚಳ. ಅಂಗವಿಕಲರ ವೇತನದಡಿಯಲ್ಲಿ ಶೇ.40 ರಿಂದ 75ರಷ್ಟು ಅಂಗವಿಕಲರಿಗೆ ರೂ.600ರಿಂದ 800ಕ್ಕೆ ಏರಿಕೆ ಮಾಡುವುದಾಗಿ ಘೋಷಣೆ ಮಾಡಿದರು.
ಇನ್ನು ನನ್ನ ಆಡಳಿತ ಜನಪರ ಇರುವ ಸ್ಟ್ಯಾಂಪ್ ಆಗುತ್ತೆ. ಪವರ್ ಆಫ್ ಸೆಂಟರ್ ಒಬ್ಬ ವ್ಯಕ್ತಿ ಕೇಂದ್ರಿತವಲ್ಲ. ನನ್ನ ಪ್ರಕಾರ ಟೀಂ ವರ್ಕ್ ಪವರ್ ಆಫ್ ಸೆಂಟರ್ ಎಂದ ಬೊಮ್ಮಾತಿ, ನಾಳೆ ಕಾರವಾರಕ್ಕೆ ಹೋಗಿ ಸಮಗ್ರ ಪರಿಸ್ಥಿತಿ ಅರ್ಥ ಮಾಡಿಕೊಂಡು ಸಭೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದರು.