ದಲಿತ ಕುಟುಂಬದ ಹತ್ಯೆ : ಸಿಬಿಐ ತನಿಖೆಗೆ ಚಂದ್ರಶೇಖರ್ ಆಜಾದ್ ಆಗ್ರಹ
ಮಧ್ಯಪ್ರದೇಶ : ನೆಮಾವರ್ ಪಟ್ಟಣದಲ್ಲಿ ದಲಿತ ಕುಟುಂಬದ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಆಗ್ರಹಿಸಿದ್ದಾರೆ.
ನೆಮಾವರ್ ಪಟ್ಟಣದಲ್ಲಿ ಹತ್ಯೆಗೀಡಾದ ದಲಿತ ಕುಟುಂಬವರ ಸಂಬಂಧಿಕರನ್ನು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಭೇಟಿಯಾಗಿ ಸಾಂತ್ವನ ಹೇಳಿದರು. ಬಳಿಕ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿದರು.
ಕಳೆದ ಮೇ 13 ರಂದು ನಾಪತ್ತೆಯಾಗಿದ್ದ ನೆಮಾವರ್ ನ ಮಮತಾ ಬಾಲೈ (45), ಅವರ ಪುತ್ರಿಯರಾದ ರೂಪಾಲಿ (21) ಮತ್ತು ದಿವ್ಯಾ (14) ಸಂಬಂಧಿಗಳಾದ ಪೂಜಾ (15) ಮತ್ತು ಪವನ್ (14) ಅವರ ಮೃತದೇಹಗಳು ಜೂನ್ 26 ರಂದು ಜಮೀನಿನಲ್ಲಿ ಹೂತು ಹಾಕಿರುವುದು ಬೆಳಕಿಗೆ ಬಂದಿತ್ತು.