2 ವರ್ಷದ ಮಗು ಆಟವಾಡುತ್ತ ಹೋಗಿ ಜ್ಯೂಸ್ ಎಂದು ಭಾವಿಸಿ ಕೀಟನಾಶಕ ಸೇವಿಸಿ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಗ್ರಾಮದಲ್ಲಿನ ಪುಷ್ಪ ಹಾಗೂ ಹನುಮಂತು ಎಂಬವರ ಪುತ್ರ ಎರಡು ವರ್ಷದ ಯಶ್ವಿಕ್ (2) ಸಾವನ್ನಪ್ಪಿದ ದುರ್ದೈವ ಬಾಲಕ. ಮನೆಯಲ್ಲಿ ಜಮೀನಿಗೆ ಸಿಂಪಡಿಸಿ ಉಳಿದಿದ್ದ ಕೀಟನಾಶಕವನ್ನು ತಂದೆ ಹನುಮಂತು ಇಟ್ಟಿದ್ದರು. ಈ ವೇಳೆ ಮಗು ಆಟವಾಡುವಾಗ ಕೀಟನಾಶಕದ ಬಾಟೆಲ್ ನೋಡಿ ಜ್ಯೂಸ್ ಎಂದು ಭಾವಿಸಿ ಕುಡಿದಿದೆ.
ಆ ನಂತರ ಮಗುವಿಗೆ ಹೊಟ್ಟಿ ನೋವು ಹೆಚ್ಚಾಗಿದೆ. ಕೂಡಲೇ ಪಾಲಕರು ಮಗುವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.