5.5 ತಿಂಗಳಿಗೆ ಜನಿಸಿದ ಮಗು – ಗಿನ್ನಿಸ್ ದಾಖಲೆ
ಅಮೆರಿಕಾ : ಸಾಮಾನ್ಯವಾಗಿ ಒಬ್ಬ ಮಹಿಳೆ ಗರ್ಭ ಧಾರಣೆ ಮಾಡಿದ 9 ತಿಂಗಳ ನಂತರ ಮಗುವಿಗೆ ಜನ್ಮ ನೀಡುತ್ತಾರೆ.. ಕೆಲ ಸಂದರ್ಭಗಳಲ್ಲಿ ಬೇಗನೇ ಅಂದ್ರೆ ನಿಗದಿತ ಡೇಟ್ ಗಿಂತ 15 ದಿನ ಮುಂದೆ ಮಗು ಜನಿಸುವ ಸಾಧ್ಯತೆಯಿರುತ್ತದೆ.. ಆದ್ರೆ 2020ರ ಜುಲೈನಲ್ಲಿ ಅಮೆರಿಕಾದ ಅಲಬಾಮದಲ್ಲಿ ಐದೂವರೆ ತಿಂಗಳಲ್ಲೇ ಜನಿಸಿದ ಮಗುವು ಅವಧಿಗಿಂತ ಮುಂಚಿತವಾಗಿ ಹುಟ್ಟಿ ಬದುಕುಳಿದ ಮಗು ಎಂಬ ಗಿನ್ನಿಸ್ ದಾಖಲೆಯನ್ನು ತನ್ನ ಹೆಸರಿನಲ್ಲಿ ಬರೆದುಕೊಂಡಿದೆ.
ಹೌದು 2020 ಜುಲೈ 4ರಂದು ಮಿಶೆಲ್ ಬಟ್ಲರ್ ಅವರಿಗೆ ಜನಿಸಿದ ಮಗು ಕುರ್ಟಿಸ್ ಝೈ-ಕೀರ್ತ್ ಈಗ ಗಿನ್ನಿಸ್ ದಾಖಲೆಗೆ ಭಾಜನವಾಗಿದೆ. ಮಿಶೆಲ್ 2020ರ ನವೆಂಬರ್ 11ರಂದು ತಮ್ಮ ಮಗುವಿನ ಜನ್ಮ ನೀಡಬೇಕಿತ್ತು. ಆದರೆ ಆರೋಗ್ಯ ಪರೀಕ್ಷೆಗೆ 2020ರ ಜುಲೈ 4 ರಂದು ಆಸ್ಪತ್ರೆಗೆ ಬಂದ ಮಿಶೆಲ್ ಅವರನ್ನು ಅಲಬಾಮನ ವಿವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಮದುವೆಗೆ ಬಂದ ಅತಿಥಿಗಳ ಬಳಿ ಊಟದ ಬಿಲ್ ಪಾವತಿಸಿ ಎಂದ ವಧು..!
ಮಿಶೆಲ್ ಅವರಿಗೆ ಒಂದು ಹೆಣ್ಣು, ಗಂಡು ಮಗು ಜನಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಹೆಣ್ಣು ಮಗುಸಾವನ್ನಪ್ಪಿತ್ತು. ಆದರೆ ಹುಟ್ಟಿದಾಗ ಗಂಡು ಮಗು ಕೇವಲ 420 ಗ್ರಾಂ ಅಂದರೆ ಒಂದು ಪುಟ್ಬಾಲ್ ತೂಕ ಕ್ಕಿಂತ ಕಡಿಮೆ ಇತ್ತು. ಈಗ ಇದು ಸಾಮಾನ್ಯ ಮಗುವಿನಂತೆ ಬೆಳೆಯುತ್ತಿದೆ ಎಂದು ಹೇಳಲಾಗಿದೆ.