ಚೀನಾ ಪಾಕಿಸ್ತಾನಕ್ಕೆ ಕಷ್ಟದ ಸಮಯದಲ್ಲಿ ಸಹಾಯ ಮಾಡುವ ನಿಜವಾದ ಸ್ನೇಹಿತ – ಪಾಕ್
ದೇಶದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯಲ್ಲಿ (ಎನ್ಐಹೆಚ್) ನಡೆದ ಸಮಾರಂಭದಲ್ಲಿ ಪಾಕಿಸ್ತಾನ ಮಂಗಳವಾರ ಸ್ಥಳೀಯವಾಗಿ ತಯಾರಿಸಿದ ಚೀನೀ ಕ್ಯಾನ್ಸಿನೊ ಕೋವಿಡ್ -19 ಲಸಿಕೆಯನ್ನು ಬಿಡುಗಡೆ ಮಾಡಿದೆ. ಪಾಕಿಸ್ತಾನದ ಆರೋಗ್ಯ ಮಂತ್ರಿ ಫೈಸಲ್ ಸುಲ್ತಾನ್ ಅವರ ಲಸಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಕ್ಯಾನ್ಸಿನೊ ಲಸಿಕೆಯ ಸ್ಥಳೀಯ ಉತ್ಪಾದನೆಯು ದೇಶಕ್ಕೆ ಒಂದು ಮೈಲಿಗಲ್ಲು ಎಂದು ಹೇಳಿದ್ದಾರೆ. ಇದು ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಪಾಕಿಸ್ತಾನದ ಹೋರಾಟದಲ್ಲಿ ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ.
ಕೊರೋನಾ ವೈರಸ್ ವಿರುದ್ಧ ಉಭಯ ದೇಶಗಳ ನಡುವಿನ ಲಸಿಕೆ ಸಹಕಾರವು ವಿಶ್ವದ ಇತರ ದೇಶಗಳಿಗೆ ಒಂದು ಉದಾಹರಣೆಯಾಗಿದೆ. ಚೀನಾ ಪಾಕಿಸ್ತಾನಕ್ಕೆ ಕಷ್ಟದ ಸಮಯದಲ್ಲಿ ಸಹಾಯ ಮಾಡುವ ನಿಜವಾದ ಸ್ನೇಹಿತ ಎಂದು ಸುಲ್ತಾನ್ ಹೇಳಿದ್ದಾರೆ.
ಕಚ್ಚಾ ವಸ್ತುಗಳಿಂದ ಲಸಿಕೆ ತಯಾರಿಸುವುದು ಸ್ವತಃ ದೊಡ್ಡ ಸವಾಲಾಗಿತ್ತು. ಆದರೆ ಎಲ್ಲಾ ತೊಂದರೆಗಳ ನಡುವೆಯೂ ಲಸಿಕೆ ತಯಾರಿಸುವಲ್ಲಿ ನಮ್ಮ ತಂಡ ಯಶಸ್ವಿಯಾಗಿದೆ. ಇಂದು ದೇಶಕ್ಕೆ ಬಹಳ ಮುಖ್ಯವಾದ ದಿನ ಎಂದು ಅವರು ಹೇಳಿದರು.
ರಾಷ್ಟ್ರೀಯ ಕಮಾಂಡ್ ಮತ್ತು ಆಪರೇಷನ್ ಸೆಂಟರ್ ಮುಖ್ಯಸ್ಥರೂ ಆಗಿರುವ ಪಾಕಿಸ್ತಾನದ ಯೋಜನಾ ಮತ್ತು ಅಭಿವೃದ್ಧಿ ಸಚಿವ ಅಸಾದ್ ಉಮರ್ ಅವರು ಸಮಾರಂಭದಲ್ಲಿ ಸ್ಥಳೀಯ ಮಟ್ಟದಲ್ಲಿ ನಡೆಸಿದ ಸಮೀಕ್ಷೆಯ ಫಲಿತಾಂಶಗಳನ್ನು ಹಂಚಿಕೊಂಡರು. ಕ್ಯಾನ್ಸಿನೊ ಲಸಿಕೆ ಸೇರಿದಂತೆ ಚೀನಾದ ಲಸಿಕೆಗಳು ಉತ್ತಮ ಗುಣಮಟ್ಟ ಮತ್ತು ಪರಿಣಾಮಕಾರಿ ಫಲಿತಾಂಶ ನೀಡಿದೆ ಎಂದು ಅವರು ಹೇಳಿದರು.
ಕೊರೋನಾ ಲಸಿಕೆಯ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ಚೀನಾ ಮತ್ತು ಪಾಕಿಸ್ತಾನ ನಡುವಿನ ಲಸಿಕೆ ಸಹಕಾರವು ಕೋವಿಡ್ -19 ರ ವಿರುದ್ಧ ಹೋರಾಡುವ ಪಾಕಿಸ್ತಾನದ ಪ್ರಯತ್ನಗಳಿಗೆ ಸಹಕಾರಿಯಾಗಲಿದೆ ಎಂದು ಪಾಕಿಸ್ತಾನದ ಚೀನಾ ರಾಯಭಾರಿ ನಾಂಗ್ ರೋಂಗ್ ಹೇಳಿದ್ದಾರೆ. ಸಾಂಕ್ರಾಮಿಕ ರೋಗದಿಂದ ದೇಶವನ್ನು ಸಂಪೂರ್ಣವಾಗಿ ಮುಕ್ತಗೊಳಿಸುವ ಕೋವಿಡ್ -19 ವಿರುದ್ಧದ ಪಾಕಿಸ್ತಾನದ ಹೋರಾಟವನ್ನು ಚೀನಾ ಬೆಂಬಲಿಸುತ್ತಲೇ ಇರುತ್ತದೆ ಎಂದು ಚೀನಾದ ರಾಯಭಾರಿ ಹೇಳಿದ್ದಾರೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಬ್ಬಿನ ರಸದ ಇನ್ನಷ್ಟು ಆರೋಗ್ಯ ಪ್ರಯೋಜನಗಳು#Saakshatv #healthtips #sugarcane https://t.co/2XjBuk8raQ
— Saaksha TV (@SaakshaTv) June 1, 2021
ಎಸ್ಬಿಐ ನಿಂದ 5 ಲಕ್ಷ ರೂಪಾಯಿಗಳ ಕೋವಿಡ್ ಪರ್ಸನಲ್ ಲೋನ್! ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?#SBI #coronatreatment https://t.co/kxXOOAG3vK
— Saaksha TV (@SaakshaTv) June 2, 2021
ರುಚಿಯಾದ ಕ್ಯಾಪ್ಸಿಕಂ ಬಾತ್#saakshatv #cooking #recipe https://t.co/MhP2wa419O
— Saaksha TV (@SaakshaTv) June 2, 2021
ನಿಮಗೆ ದಿನವಿಡೀ ಆಲಸ್ಯ , ದಣಿವು ಕಾಣಿಸಿಕೊಳ್ಳುತ್ತಿದೆಯೇ? ಹಾಗಿದ್ದರೆ ವಿಟಮಿನ್ ಡಿ ಕೊರತೆ ಕಾರಣವಾಗಿರಬಹುದು#Saakshatv #healthtips #vitaminD https://t.co/GlsUpQobAH
— Saaksha TV (@SaakshaTv) June 2, 2021
ಕೋವಿಡ್ ಚಿಕಿತ್ಸೆಗಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳು ನೀಡಲಿದೆ 5 ಲಕ್ಷ ರೂಗಳವರೆಗೆ ಸಾಲ !#Banks #loans #covidtreatment https://t.co/tJYFqSyYYO
— Saaksha TV (@SaakshaTv) June 1, 2021
#China #Pakistan