ಅಮೆರಿಕ ಅಧಿಕಾರಿಗಳ ಚೀನಾ ಪ್ರವಾಸಕ್ಕೆ ನಿರ್ಬಂಧ ಹೇರಿದ ಚೀನಾ
ಬೀಜಿಂಗ್, ಜುಲೈ 9: ಟಿಬೆಟ್ ಗೆ ವಿದೇಶಿಯರ ಭೇಟಿಯನ್ನು ನಿರ್ಬಂಧಿಸಿದ ಹಿನ್ನಲೆಯಲ್ಲಿ ಅಮೆರಿಕ ಚೀನಾದ ಅಧಿಕಾರಿಗಳಿಗೆ ಅಮೆರಿಕ ಪ್ರಯಾಣಕ್ಕೆ ನಿಷೇಧ ಹೇರಿದ ನಂತರ ಅಮೆರಿಕ ಸಿಬ್ಬಂದಿಗಳ ಮೇಲೆ ವೀಸಾ ನಿರ್ಬಂಧ ಹೇರಲಿದೆ ಎಂದು ಚೀನಾ ಹೇಳಿದೆ.
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜೋ ಲಿಜಿಯಾನ್ ಬುಧವಾರ ಟಿಬೆಟ್ ವಿಷಯಗಳಿಗೆ ಸಂಬಂಧಿಸಿ ಕೆಟ್ಟದ್ದಾಗಿ ಅಮೆರಿಕ ವರ್ತಿಸುತ್ತಿದೆ ಎಂದು
ಆರೋಪಿಸಿದ್ದು, ಅಮೆರಿಕದ ತಪ್ಪು ನಿರ್ಧಾರಗಳಿಗೆ ಪ್ರತಿಯಾಗಿ ನಾವು ಆ ದೇಶದ ಸಿಬ್ಬಂದಿ ಮೇಲೆ ವೀಸಾ ನಿರ್ಬಂಧವನ್ನು ವಿಧಿಸುವ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
“ಟಿಬೆಟ್ ಸಂಬಂಧಿತ ವಿಷಯಗಳೊಂದಿಗೆ ಚೀನಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸುವಂತೆ ನಾವು ಅಮೆರಿಕವನ್ನು ಒತ್ತಾಯಿಸುತ್ತೇವೆ. ಇದರಿಂದಾಗಿ ಚೀನಾ-ಯುಎಸ್ ಸಂಬಂಧಗಳು ಮತ್ತಷ್ಟು ಹಾನಿಯಾಗದಂತೆ ನೋಡಿಕೊಳ್ಳಿ” ಎಂದು ಜೋ ಲಿಜಿಯಾನ್ ತಮ್ಮ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಚೀನಾ ಟಿಬೆಟ್ ಗೆ ವಿದೇಶಿಯರ ಭೇಟಿಯನ್ನು ನಿರ್ಬಂಧಿಸಿದ ಬೆನ್ನಲ್ಲೇ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ, ಚೀನಾ ಸರ್ಕಾರ ಹಾಗೂ ಕ್ಯೂನಿಸ್ಟ್ ಪಕ್ಷದ ಅಧಿಕಾರಿಗಳಿಗೆ ಯುಎಸ್ ಪ್ರಯಾಣಕ್ಕೆ ನಿರ್ಬಂಧವನ್ನು ವಿಧಿಸಿದ್ದೇವೆ ಎಂದು ಟ್ವೀಟ್ ಮಾಡಿದ್ದರು ಮತ್ತು 2018ರ ಕಾಯ್ದೆಯ ಅಡಿಯಲ್ಲಿ ಚೀನಾದ ಕೆಲ ಅಧಿಕಾರಿಗಳಿಗೆ ವೀಸಾ ನಿರ್ಬಂಧವನ್ನು ಹೇರಿದ್ದರು.