ಚೀನಾ ಸಂಪುಟದ ಸಚಿವರು ಒಬ್ಬರ ಹಿಂದೆ ಒಬ್ಬರಂತೆ ನಾಪತ್ತೆಯಾಗುತ್ತಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಮತ್ತು ಮಾಜಿ ರಾಕೆಟ್ ಫೋರ್ಸ್ ಜನರಲ್ ನಾಪತ್ತೆಯಾಗಿದ್ದರು. ಸದ್ಯ ಚೀನಾದ ರಕ್ಷಣಾ ಸಚಿವ ಲಿ ಶಾಂಗ್‌ಫು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಎರಡು ವಾರಗಳಿಂದ ಅವರು ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಜಪಾನ್‌ನ ಯುಎಸ್ ರಾಯಭಾರಿ ರಹಮ್ ಇಮ್ಯಾನುಯೆಲ್ ಚೀನಾದ ರಾಜಕೀಯ ಅಸ್ಥಿರತೆ ಕುರಿತು ಚೀನಾ ರಕ್ಷಣಾ ಸಚಿವರು ಕಳೆದ ಎರಡು ವಾರಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಚೀನಾ ಅಧ್ಯಕ್ಷರ ಸಚಿವ ಸಂಪುಟ ‘ಅಗಾಥಾ ಕ್ರಿಸ್ಟಿ’ ಅವರ ಕಾದಂಬರಿ ಹೋಲುತ್ತದೆ ಎಂದು ಬರೆದುಕೊಂಡಿದ್ದಾರೆ.