ಚೀನಾದ ಡ್ರ್ಯಾಗನ್ ಹಣ್ಣಿನಲ್ಲಿ ಕಂಡು ಬಂದ ಕರೋನಾ ವೈರಸ್…!!!
ಕರೋನಾ ಬಂದ ಮೇಲೆ ನಾವು ಮನುಷ್ಯರಿಂದ ಅಂತರ ಕಾಪಾಡಿಕೊಂಡಿದ್ವಿ ಈಗ ಹಣ್ಣುಗಳಿಂದಲೂ ಅಂತರ ಕಾಪಾಡಿಕೊಳ್ಳುವ ಸ್ಥಿತಿ ಬಂದಿದೆ.
ಚೀನಾ ದೇಶವು ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಹಣ್ಣುಗಳಲ್ಲಿ ಕರೋನ ವೈರಸ್ನ ವೈರಾಣುಗಳು ಕಂಡುಬಂದ ಹಿನ್ನಲೆಯಲ್ಲಿ ಚೀನಾದ ಅಧಿಕಾರಿಗಳು ಸೂಪರ್ಮಾರ್ಕೆಟ್ಗಳನ್ನು ಬಂದ್ ಮಾಡಿದ್ದಾರೆ.
ಝೆಜಿಯಾಂಗ್ ಮತ್ತು ಜಿಯಾಂಗ್ಕ್ಸಿ ಪ್ರಾಂತ್ಯದ ಕನಿಷ್ಠ ಒಂಬತ್ತು ನಗರಗಳಲ್ಲಿ ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಡ್ರ್ಯಾಗನ್ ಹಣ್ಣಿನಲ್ಲಿ ಕರೋನವೈರಸ್ ಮಾದರಿಗಳನ್ನು ಕಂಡುಬಂದಿದೆ ಎಂದು ಚೀನಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಅಧಿಕಾರಿಗಳು ಆಮದು ಮಾಡಿಕೊಂಡ ಆಹಾರ ಉತ್ಪನ್ನಗಳ ತುರ್ತು ತಪಾಸಣೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಹಣ್ಣು ಖರೀದಿದಾರರು ಸ್ವಲ್ಪ ದಿನಗಳ ಕಾಲ ಕೊಂಡುಕೊಳ್ಳದೆ ಇರುವಂತೆ ಆದೇಶಿಸಿದ್ದಾರೆ,
ಆದರೆ ಆಹಾರದಿಂದ ಕರೋನವೈರಸ್ ಹರಡುವ ಯಾವುದೇ ಪುರಾವೆಗಳಿಲ್ಲ ಇದುವರೆಗೆ ಕಂಡು ಬಂದಿಲ್ಲ.
ಡಿಸೆಂಬರ್ ಕೊನೆಯ ವಾರದಲ್ಲಿ COVID-19 ಮಾದರಿ ಪತ್ತೆಯಾಗಿದ್ದರಿಂದ ಚೀನಾ ಈ ಹಿಂದೆ ವಿಯೆಟ್ನಾಂನಿಂದ ಆಮದು ಮಾಡಿಕೊಳ್ಳುವ ಡ್ರ್ಯಾಗನ್ ಹಣ್ಣಿನ ಮೇಲೆ ಜನವರಿ 26 ರವರೆಗೆ ನಿಷೇಧ ಹೇರಿತ್ತು.