ಚೀನಾದ ಹ್ಯಾಕರ್ ಗಳಿಂದ ವಾಟ್ಸಾಪ್ ನಲ್ಲಿ ಅರೆಕಾಲಿಕ ಕೆಲಸದ ಭರವಸೆ !
ಹೊಸದಿಲ್ಲಿ, ಜನವರಿ13: ವಾಟ್ಸಾಪ್ ಖಾಸಗಿ ಮಾಹಿತಿ ಸೋರಿಕೆ ಬಗ್ಗೆ ಚರ್ಚೆಯಾಗುತ್ತಿರುವ ನಡುವೆ ಬಳಕೆದಾರರಿಗೆ ಅರೆಕಾಲಿಕ ಉದ್ಯೋಗಗಳನ್ನು ನೀಡುವ ಸಂದೇಶ ವಾಟ್ಸಾಪ್ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಕಳೆದ ವಾರ, ಭಾರತದಾದ್ಯಂತ ಅನೇಕ ವಾಟ್ಸಾಪ್ ಬಳಕೆದಾರರು ಅಪರಿಚಿತ ಸಂಪರ್ಕಗಳಿಂದ ವಾಟ್ಸಾಪ್ನಲ್ಲಿ ಸಂದೇಶಗಳನ್ನು ಸ್ವೀಕರಿಸಿದ್ದಾರೆ. ಸಂದೇಶವು ಬಳಕೆದಾರರಿಗೆ ಅರೆಕಾಲಿಕ ಕೆಲಸವನ್ನು ನೀಡುವ ಭರವಸೆ ನೀಡಿದ್ದು, ದಿನಕ್ಕೆ 30 ನಿಮಿಷಗಳು ಮಾತ್ರ ಕೆಲಸ ಮಾಡುವ ಮೂಲಕ ಅವರಿಗೆ ದಿನಕ್ಕೆ 3000 ರೂ ಗಳಿಸುವ ಅವಕಾಶವನ್ನು ನೀಡಿದೆ.
ಯುಆರ್ಎಲ್ ಮೂಲಕ ಅನೇಕ ವಿಭಿನ್ನ ಲಿಂಕ್ ತೆರೆದುಕೊಳ್ಳುತ್ತಿವೆ. ಅಲ್ಲದೇ ಈ ಸಂದೇಶಗಳನ್ನು ಪ್ರತಿ ಬಾರಿ ವಿಭಿನ್ನ ಸಂಖ್ಯೆಗಳ ಮೂಲಕ ರವಾನಿಸಲಾಗುತ್ತಿದೆ. ಅದನ್ನು ಕ್ಲಿಕ್ ಮಾಡಿದರೆ ಹಣ, ಸೂಕ್ಷ್ಮ ಡೇಟಾ ಮತ್ತು ಇನ್ನೂ ಹೆಚ್ಚಿನ ನಷ್ಟಕ್ಕೆ ಕಾರಣವಾಗಬಹುದು ಎಂದು ಥಿಂಕ್ ಟ್ಯಾಂಕ್ ಸೈಬರ್ ಪೀಸ್ ಫೌಂಡೇಶನ್ ಬಹಿರಂಗಪಡಿಸಿದೆ.
ಬಿಇಎಲ್ – ಎಂಜಿನಿಯರ್ ಪದವೀಧರ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ
ವಾಟ್ಸಾಪ್ನಲ್ಲಿ ಹರಿದಾಡುತ್ತಿರುವ ಸಂದೇಶವು ಹೀಗಿದೆ, ‘ಅರೆಕಾಲಿಕ ಕೆಲಸವಿದೆ. ನಿಮ್ಮ ಮೊಬೈಲ್ ಫೋನ್ ಅನ್ನು ಮನೆಯಲ್ಲಿ ಕಾರ್ಯನಿರ್ವಹಿಸಲು ನೀವು ಬಳಸಬಹುದು. ದಿನಕ್ಕೆ 10-30 ನಿಮಿಷಗಳ ಕಾಲ ಕೆಲಸ ಮಾಡಿ ನೀವು ದಿನಕ್ಕೆ 200-3000 ರೂಪಾಯಿಗಳನ್ನು ಗಳಿಸಬಹುದು , ನಮ್ಮೊಂದಿಗೆ ಶೀಘ್ರವಾಗಿ ಸೇರಲು ಲಿಂಕ್ ಅನ್ನು ದೀರ್ಘ ಕ್ಲಿಕ್ ಮಾಡಿ.’
ವಾಟ್ಸಾಪ್ ಮೂಲಕ ಈ ಸಂದೇಶವು ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗುತ್ತಿದೆ. ಈ ಹಿನ್ನಲೆಯಲ್ಲಿ ಸೈಬರ್ ಪೀಸ್ ಫೌಂಡೇಶನ್ ಮತ್ತು ಆಟೊಬೊಟ್ ಇನ್ಫೋಸೆಕ್ ಪ್ರೈವೇಟ್ ಲಿಮಿಟೆಡ್ನ ತಜ್ಞರು ಈ ಬಗ್ಗೆ ಸ್ವತಂತ್ರ ತನಿಖೆಗೆ ಮುಂದಾಗಿದ್ದಾರೆ.
ವಾಟ್ಸಾಪ್ನಲ್ಲಿ ಪತ್ತೆಯಾಗುತ್ತಿರುವ ವಿವಿಧ ಲಿಂಕ್ಗಳು ಚೀನಾದ ಹೋಸ್ಟಿಂಗ್ ಕಂಪನಿ ಆಲಿಬಾಬಾ ಕ್ಲೌಡ್ನ ಐಪಿ ವಿಳಾಸ ಹೊಂದಿದ್ದು, ಈ ಯುಆರ್ಎಲ್ ಅನ್ನು ಡಿಕೋಡ್ ಮಾಡಿದಾಗ ಅದು ಚೀನಿ ಭಾಷೆಯಲ್ಲಿ ಸಂಕೇತವನ್ನು ತೋರಿಸುತ್ತಿದೆ. ಅಷ್ಟೇ ಅಲ್ಲ ಈ ಡೋಮೆನ್ ಹೆಸರುಗಳು ಚೀನಾದಲ್ಲಿ ನೋಂದಾಯಿಸಲಾಗಿದೆ ಎಂದು ತನಿಖೆ ವೇಳೆ ತಿಳಿದುಬಂದಿದೆ. ಚೀನಾ ಮೂಲದ ಹ್ಯಾಂಕರ್ಗಳು ವಾಟ್ಸಾಪ್ ಬಳಕೆದಾರರನ್ನು ಗುರಿಯಾಗಿಸಿಕೊಂಡು ಅರೆಕಾಲಿಕ ಉದ್ಯೋಗ ನೀಡುವ ಭರವಸೆಯನ್ನು ನೀಡುತ್ತಿರಬಹುದು ಎಂದು ಹೇಳಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಮೊಟ್ಟೆಗಳ ಸೇವನೆಯಿಂದ ಮೂತ್ರಪಿಂಡ (ಕಿಡ್ನಿ) ತೊಂದರೆhttps://t.co/f1WeQRvdL9
— Saaksha TV (@SaakshaTv) January 12, 2021
ಎಷ್ಟು ಮೊತ್ತಕ್ಕಿಂತ ಹೆಚ್ಚಿನ ಆಭರಣ ಖರೀದಿಗೆ ಪ್ಯಾನ್ / ಆಧಾರ್ ದಾಖಲೆ ಕಡ್ಡಾಯ ? – ಇಲ್ಲಿದೆ ಮಾಹಿತಿhttps://t.co/CrjHYzvDzK
— Saaksha TV (@SaakshaTv) January 12, 2021