Chitradurga | ಒಂದೇ ಕುಟುಂಬದ ನಾಲ್ವರು ಬಲಿ!
ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ
ಹೊಳಲ್ಕೆರೆಯ ದುಮ್ಮಿ ಗ್ರಾಮದಲ್ಲಿ ಘಟನೆ
43 ವರ್ಷದ ನಾಗರಾಜ್, 38 ವರ್ಷದ ಶೈಲಜಾ
15 ವರ್ಷ ವೀರೇಶ್, 13 ವರ್ಷದ ಸಂತೋಷ್ ಮೃತರು
ಚಿತ್ರದುರ್ಗ : ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದಲ್ಲಿ ನಡೆದಿದೆ.
43 ವರ್ಷದ ನಾಗರಾಜ್, 38 ವರ್ಷದ ಶೈಲಜಾ, 15 ವರ್ಷ ವೀರೇಶ್, 13 ವರ್ಷದ ಸಂತೋಷ್ ಮೃತ ದುರ್ದೈವಿಗಳಾಗಿದ್ದಾರೆ.
ಇವರನ್ನು ಹೊಳಲ್ಕೆರೆ ತಾಲೂಕಿನ ಬಿ.ದುರ್ಗಾ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ.
ನಾಗರಾಜ್ ಕುಟುಂಬ ದಾವಣಗೆರೆಯ ಹೆಬ್ಬಳಗೆರೆ ಗ್ರಾಮದ ಜಾತ್ರೆ ಮುಗಿಸಿಕೊಂಡು ಸ್ವಗ್ರಾಮಕ್ಕೆ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ.
ಬೈಕ್ ಗೆ ಬಸ್ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇನ್ನು ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Chitradurga-Accident in Holalkere Bus Hits Bike Four Members Died