ಜೆರುಸೆಲಂನ ಪವಿತ್ರ ಮಸೀದಿಯಲ್ಲಿ ಘರ್ಷಣೆ – 59 ಪ್ಯಾಲೆಸ್ತೇನಿಯನ್ನರಿಗೆ ಗಾಯ
ಇಸ್ರೇಲ್ನ ರಾಜಧಾನಿ ಜೆರುಸಲೆಮ್ನಲ್ಲಿರುವ ಅಲ್-ಅಕ್ಸಾ ಮಸೀದಿಯಲ್ಲಿ ಪ್ಯಾಲೆಸ್ತೀನ್ ನಾಗರಿಕರು ಮತ್ತು ಇಸ್ರೇಲಿ ಪೊಲೀಸರ ನಡುವೆ ಘರ್ಷಣೆಗಳು ನಡೆದಿವೆ. ಶುಕ್ರವಾರ ಮುಂಜಾನೆ ಘರ್ಷಣೆ ನಡೆದಿದ್ದು, ಸುಮಾರು 59 ಪ್ಯಾಲೆಸ್ಟೀನಿಯನ್ನರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬೆಳಗಿನ ಪ್ರಾರ್ಥನೆಗೆ ಸಾವಿರಾರು ಮುಸ್ಲಿಮರು ಮಸೀದಿಯಲ್ಲಿ ಜಮಾಯಿಸಿದ್ದರು ಎಂದು ಹೇಳಲಾಗುತ್ತಿದೆ. ಅಷ್ಟರಲ್ಲಿ ಇಸ್ರೇಲ್ ಪೊಲೀಸರೂ ಮಸೀದಿಯೊಳಗೆ ಪ್ರವೇಶಿಸಿದರು. ಈ ವೇಳೆ ಇಬ್ಬರ ನಡುವೆ ಘರ್ಷಣೆ ನಡೆದಿದೆ. ಈ ಘಟನೆಯ ಹಲವು ವಿಡಿಯೋಗಳು ಕೂಡ ಹೊರಬಿದ್ದಿವೆ. ಪ್ಯಾಲೇಸ್ಟಿನಿಯನ್ನರು ಕಲ್ಲು ತೂರಾಟ ನಡಸಿದರೆ ಪೊಲೀಸರು ಅಶ್ರುವಾಯು ಶೆಲ್ಗಳನ್ನು ಸಿಡಿಸಿದ್ದಾರೆ.
ಹಿಂಸಾಚಾರಕ್ಕೆಂದು ಸಂಗ್ರಹಿಸಿದ್ದ ಕಲ್ಲುಗಳನ್ನ ವಶಪಡಿಸಿಕೊಳ್ಳುವ ಸಲುವಾಗಿ ಇಸ್ರೇಲ್ ಪಡೆಗಳು ಒಳನುಗ್ಗಿವೆ ಎಂದು ಇಸ್ರೇಲ್ ಹೇಳಿದೆ. ಪ್ಯಾಲಿಸ್ತೇನಿಯನ್ ಮತ್ತು ಹಮಾಸ್ ಧ್ವಜಗಳನ್ನ ಹೊತ್ತ ಹತ್ತಾರು ಮುಸುಕುಧಾರಿಗಳು ಬಂಡೆಗಳು ಮತ್ತು ಕಲ್ಲುಗಳನ್ನ ಸಂಗ್ರಹಿಸಿದ್ದರು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.