ಗ್ಯಾಂಗ್ಟಾಕ್ : ಭೀಕರ ಮೇಘಸ್ಪೋಟ ಸಂಭವಿಸಿದ ಪರಿಣಾಮ 22 ಜನ ಸೇನಾ ಸಿಬ್ಬಂದಿ ಸೇರಿದಂತೆ 82 ಜನರು ನಾಪತ್ತೆಯಾಗಿರುವ ಘಟನೆ ನಡೆದಿದೆ.
ಈ ಮೇಘಸ್ಪೋಟ ಉತ್ತರ ಸಿಕ್ಕಿಂನಲ್ಲಿ (Sikkim) ನಡೆದಿದೆ. ಇದರಿಂದಾಗಿ ಅಲ್ಲಿ ಹರಿಯುತ್ತಿರುವ (Cloudburst) ತೀಸ್ತಾ ನದಿಯಲ್ಲಿ ಹಠಾತ್ ಪ್ರವಾಹ (Flood) ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಘಟನೆಯಲ್ಲಿ 10 ಜನ ಸಾವನ್ನಪ್ಪಿದ್ದು, 22 ಸೇನಾ ಸಿಬ್ಬಂದಿ ಸೇರಿದಂತೆ 82 ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಲ್ಲದೇ, ಪ್ರವಾಹದಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದ್ದು, 14 ಸೇತುವೆಗಳು ಕುಸಿದು ಹೋಗಿವೆ. 3 ಸಾವಿರಕ್ಕೂ ಅಧಿಕ ಪ್ರವಾಸಿಗರು ಸಿಲುಕಿದ್ದಾರೆ ಎನ್ನಲಾಗಿದ್ದು, ಮೇಘಸ್ಫೋಟದಿಂದ ಅಲ್ಲಿನ ಚುಂಗ್‍ಥಾಂಗ್‍ನಲ್ಲಿನ ಅತಿ ದೊಡ್ಡ ಜಲವಿದ್ಯುತ್ ಘಟಕದ ಅಣೆಕಟ್ಟಿನ ಭಾಗಗಳು ನೀರಿನಿಂದ ಆವರಿಸಿದ್ದವು. ಹೀಗಾಗಿ ಕೆಳ ಭಾಗದ ಪ್ರದೇಶಗಳ ಮೇಲೆ ನೀರು ಹರಿಯುವಂತಾಗಿತ್ತು. ಇದು ಅನಾಹುತಕ್ಕೆ ಕಾರಣ ಎನ್ನಲಾಗಿದೆ.
ಸಿಂಗ್ಟಾಮ್ ಪಟ್ಟಣದಿಂದ ನಾಪತ್ತೆಯಾಗಿದ್ದ 23 ಸೈನಿಕರಲ್ಲಿ ಒಬ್ಬರನ್ನು ರಕ್ಷಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.