ರಾಜ್ಯದ ರಾಜಕೀಯ ವಾತಾವರಣ ಈಗಾಗಲೇ ಗೊಂದಲದಲ್ಲಿ ಇರುವಾಗ, ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಜಂಟಿ ಪ್ರೆಸ್ ಮೀಟ್ ನಡೆಸಿ ಯಾವ ಗೊಂದಲವೂ ಇಲ್ಲ ಎಂದು ಹೇಳಿದರೂ, ಕಾಂಗ್ರೆಸ್ ಶಾಸಕರಿಂದ ಮತ್ತೊಂದು ಸ್ಫೋಟಕ ಹೇಳಿಕೆ ಹೊರಬಿದ್ದಿದೆ.
ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಅವರು ಮಾತನಾಡಿ, ಮುಖ್ಯಮಂತ್ರಿ ಬದಲಾವಣೆ ಆಗಲೇಬೇಕು. ಡಿಸೆಂಬರ್, ಜನವರಿ ಅಥವಾ ಫೆಬ್ರವರಿಯಲ್ಲಿ ಸಿಎಂ ಬದಲಾವಣೆ ಸಂಭವಿಸಬಹುದು ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.
ಈಗ ದೊಡ್ಡ ಸಮಸ್ಯೆ ಇಲ್ಲ ಅಂತಾ ಹೇಳ್ತಾ ಇದ್ದಾರೆ. ಆದರೆ ಸಿಎಂ–ಡಿಸಿಎಂ ಇಬ್ಬರೂ ಸೇರಿ ಪ್ರೆಸ್ ಮೀಟ್ ಮಾಡ್ತಾರೆ ಅಂದ್ರೆ ಒಳಗಡೆ ಏನೋ ಗೊಂದಲ ಇದೆ ಎನ್ನೋದು ಸ್ಪಷ್ಟ. ಈ ವಿಷಯದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಹೈಕಮಾಂಡ್. ಅವರ ಸೂಚನೆ ಯಾವತ್ತೂ ಅಂತಿಮ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಶಾಂತಿ, ಸಮತೋಲನ, ಸಮರ್ಪಕ ಆಡಳಿತಕ್ಕಾಗಿ ನಾಯಕತ್ವದಲ್ಲಿ ಬದಲಾವಣೆ ಅನಿವಾರ್ಯ ಎಂದು ಅವರು ಅಭಿಪ್ರಾಯ ಹೊರಹಾಕಿದ್ದಾರೆ.
ಈ ಹೇಳಿಕೆ ಹೊರಬಿದ್ದ ತಕ್ಷಣ ಕಾಂಗ್ರೆಸ್ ವಲಯದಲ್ಲಿ ಮತ್ತೊಮ್ಮೆ ನಾಯಕತ್ವ ಚರ್ಚೆ ಎದ್ದಿದ್ದು, ಮುಂದೇನು ನಿರ್ಧಾರ ಹೊರಬೀಳಬಹುದು ಎಂಬ ಕುತೂಹಲ ಹೆಚ್ಚಾಗಿದೆ.








