ನಟ ದಿ. ಪುನೀತ್ ರಾಜಕುಮಾರ್ ಅವರ ಜನ್ಮ ದಿನವನ್ನು ಸ್ಫೂರ್ತಿ ದಿನ ಎಂದು ಆಚರಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಹಿಂದಿನ ಸರಕಾರ ಘೋಷಣೆ ಮಾಡಿತ್ತು. ಆದರೆ, ಚುನಾವಣೆ ಕಾರಣದಿಂದಾಗಿ ಆಚರಿಸಲು ಆಗಿಲ್ಲ. ನಮ್ಮ ಸರಕಾರ ಆ ದಿನವನ್ನು ಸ್ಫೂರ್ತಿ ದಿನ ಎಂದು ಆಚರಿಸಲಾಗುವುದು ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ (Ashwini Puneeth Rajkumar) ಕುಟುಂಬದ ಜೊತೆ ಸಿಎಂ ಸಿದ್ದರಾಮಯ್ಯ (Siddaramaiah) ಕೂಡ ಸಾಥ್ ನೀಡಿದರು.
ಅಪ್ಪು ಪ್ರತಿಮೆಗೆ ಮುತ್ತು ನೀಡಿ ರಾಘಣ್ಣ ಮಾತು ಆರಂಭಿಸಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಿಎಂ ಸಿದ್ದರಾಮಯ್ಯ, ಅಶ್ವಿನಿ ಪುನೀತ್, ರಾಘವೇಂದ್ರ ರಾಜ್ಕುಮಾರ್, ಯುವ, ಧನ್ಯಾ ರಾಮ್ಕುಮಾರ್, ಭೈರತಿ ಸುರೇಶ್ ಕೂಡ ಭಾಗಿಯಾಗಿದ್ದರು.