ಪಿಚ್ಚ್‌ ಸಿದ್ಧಪಡಿಸಿದ ಸಿಬ್ಬಂದಿಗೆ ಗೌರವ ಧನ – ಕೋಚ್‌ ದ್ರಾವಿಡ್‌ ನಡೆಗೆ ಮೆಚ್ಚುಗೆ

1 min read
rahul dravid team india saakshatv

ಪಿಚ್ಚ್‌ ಸಿದ್ಧಪಡಿಸಿದ ಸಿಬ್ಬಂದಿಗೆ ಗೌರವ ಧನ – ಕೋಚ್‌ ದ್ರಾವಿಡ್‌ ನಡೆಗೆ ಮೆಚ್ಚುಗೆ

ಭಾರತ ತಂಡದ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ತಮ್ಮ ವಿಶೇಷ ವ್ಯಕ್ತಿತ್ವದಿಂದ ಎಲ್ಲರ ಮನಃ ಗೆಲ್ಲುತ್ತಾರೆ. ಇಂದು ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ಗೆ ಸ್ಪೋರ್ಟಿಂಗ್ ಪಿಚ್ ಸಿದ್ಧಪಡಿಸಿದ ತಂಡಕ್ಕೆ ಗೌರವ ಧನ ನೀಡುವ ಮೂಲಕ ಮತ್ತೊಮ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಭಾರತದ ಹೊಸ ಮುಖ್ಯ Coach Rahul Dravid paid tribute to Shivakumar for his efforts by donating Rs 35,000 to the Groundstaff of Green Park. “ನಾವು ಅಧಿಕೃತ ಘೋಷಣೆ ಮಾಡಲು ಬಯಸುತ್ತೇವೆ. ಶ್ರೀ ರಾಹುಲ್ ದ್ರಾವಿಡ್ ಅವರು ನಮ್ಮ ಮೈದಾನದ ಆಟಗಾರರಿಗೆ ವೈಯಕ್ತಿಕವಾಗಿ ರೂ 35,000 ಪಾವತಿಸಿದ್ದಾರೆ,” ಎಂದು ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ (UPCA) ಆಟದ ನಂತರ ಪತ್ರಿಕಾ ಹೇಳಿಕೆಯಲ್ಲಿ ಪ್ರಕಟಿಸಿತು.

ಇಂದಿನ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಕಾನ್ಪುರ ಟೆಸ್ಟ್ ಪಂದ್ಯ ರೋಚಕ ಡ್ರಾ ನಲ್ಲಿ ಕೊನೆಗೊಂಡಿದೆ. ಕೊನೆಯ ವಿಕೆಟ್ ಪಡೆಯುವಲ್ಲಿ ಟೀಂ ಇಂಡಿಯಾ ವಿಫಲವಾಗಿದ್ದು, ಅಂತಿಮವಾಗಿ ಪಂದ್ಯ ಡ್ರಾ ಗೊಂಡಿತು. ಟೀಂ ಇಂಡಿಯಾ ನ್ಯೂಜಿಲೆಂಡ್‌ಗೆ 284 ರನ್‌ಗಳ ಟಾರ್ಗೆಟ್ ನೀಡಿತ್ತು, ಆದರೆ ಕೊನೆಯ ಎರಡು ಸೆಷನ್‌ಗಳಲ್ಲಿ ಭಾರತದ ಅದ್ಭುತ ಸ್ಪಿನ್ನರ್‌ಗಳ ಮುಂದೆ ಕಿವೀಸ್ ತಂಡ ಉಸಿರುಗಟ್ಟಿದಂತಾಯಿತು.

ಆದರೆ ಕಾನ್ಪುರ ಟೆಸ್ಟ್‌ನ ಕೊನೆಯ ಗಂಟೆಯಲ್ಲಿ ಭಾರತೀಯ ಮೂಲದವರಾದ ನ್ಯೂಜಿಲೆಂಡ್‌ನ ರಚಿನ್ ರವೀಂದ್ರ ಮತ್ತು ಎಜಾಜ್ ಪಟೇಲ್ ಕೊನೆಯ ವಿಕೆಟ್ ಬೀಳಲು ಬಿಡದೆ. ನೆಲಕ್ಕಂಟಿ ಆಡಿದರು. ಮೈದಾನದಲ್ಲಿ ಮೋಡ ಕವಿದಿದ್ದರಿಂದ ಬೆಳಕಿನ ಅಡಚಣೆಯುಂಟಾಗುತ್ತಿತ್ತು. ಕೆಟ್ಟ ಬೆಳಕಿನ ನಡುವೆಯೂ ಪಂದ್ಯ ನಡೆಯುತ್ತಿತ್ತು. ಆದರೆ ಟೀಂ ಇಂಡಿಯಾ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಪಂದ್ಯ ಕೊನೆಗಳಲು 12 ರಿಂದ 13 ನಿಮಿಷಗಳಿರುವಾಗ ಅಂಪೈರ್‌ ಗಳು ಮಂದ ಬೆಳಕಿನ ಕಾರಣ ನೀಡಿ ದಿನದಾಟವನ್ನ ಅಂತ್ಯಗೊಳಿಸಿದರು. ಇದರಿಂದ ಭಾರತ ನ್ಯೂಜಿಲ್ಯಾಂಡ್‌ ನಡುವಿನ ಟೆಸ್ಟ್‌ ಪಂದ್ಯ ರೋಚಕ ಅಂತ್ಯ ಕಂಡಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd