ನವದೆಹಲಿ: ವಂದೇ ಭಾರತ್ ರೈಲಿ (Vande Bharat Train)ನಲ್ಲಿ ನೀಡಿದ ಆಹಾರದಲ್ಲಿ ಜಿರಳೆ ಪತ್ತೆಯಾಗಿರುವ ಘಟನೆ ನಡೆದಿದೆ.
ಜೂ. 18ರಂದು ಪ್ರಯಾಣಿಕರೊಬ್ಬರು ಪ್ರಯಾಣಿಸುತ್ತಿದ್ದ ವೇಳೆ ಊಟದಲ್ಲಿ ಜಿರಳೆ (Cockroach) ಸಿಕ್ಕಿದೆ. ವಿದಿತ್ ವರ್ಷಿಣಿ ಎಂಬ ವ್ಯಕ್ತಿ ತಮ್ಮ ಊಟದ ಚಿತ್ರವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಐಆರ್ಸಿಟಿಸಿ – ಭಾರತೀಯ ರೈಲ್ವೆಯ ಕ್ಯಾಟರಿಂಗ್ ಮತ್ತು ಟಿಕೆಟ್ ಮಾರಾಟಗಾರರನ್ನು ಟ್ಯಾಗ್ ಮಾಡಿ, ರೈಲಿನಲ್ಲಿ ಕಳಪೆ ನೈರ್ಮಲ್ಯ ಸೇವೆಗಳ ಕುರಿತು ದೂರು ನೀಡಿದ್ದಾರೆ.
ದಂಪತಿಯ ಸೋದರಳಿಯ ಈ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಮಾರಾಟಗಾರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ನನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಭೋಪಾಲ್ನಿಂದ ಆಗ್ರಾಕ್ಕೆ ವಂದೇ ಭಾರತ್ನಲ್ಲಿ ಪ್ರಯಾಣಿಸುತ್ತಿದ್ದರು. ಅವರು ಆಹಾರ ಆರ್ಡರ್ ಮಾಡಿದ್ದರು. ಆದರೆ, ಆ ಆಹಾರದಲ್ಲಿ ಜಿರಲೆ ಇತ್ತು. ದಯವಿಟ್ಟು ಆ ಆಹಾರ ಮಾರಾಟಗಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಿ ಎಂದು ಪೋಸ್ಟ್ ನಲ್ಲಿ ಮನವಿ ಮಿದ್ದಾರೆ.
ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದು, “ಸಂಬಂಧಿತ ಸೇವಾ ಪೂರೈಕೆದಾರರಿಗೆ ಸೂಕ್ತವಾದ ದಂಡವನ್ನು ವಿಧಿಸಲಾಗಿದೆ” ಎಂದು ಹೇಳಿದೆ.