ಮಿರ್ಜಾಪುರ ವೆಬ್ ಸಿರೀಸ್ ವಿರುದ್ಧ ದೂರು : ಕೇಂದ್ರ ಸರ್ಕಾರ, ಅಮೆಜಾನ್ ಪ್ರೈಮ್ ಗೆ ‘ಸುಪ್ರೀಂ’ ನೋಟೀಸ್ – ಕಾರಣ..!
ನವದೆಹಲಿ: ಮಿರ್ಜಾಪುರ ವೆಬ್ ಸಿರೀಸ್ ವಿರುದ್ಧ ಸುಪ್ರೀಕೋರ್ಟ್ ನಲ್ಲಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯವು ಕೇಂದ್ರ ಸರ್ಕಾರ, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಎಕ್ಸೆಲ್ ಎಂಟರ್ ಟೈನ್ ಮೆಂಟ್ ಪ್ರೈವೇಟ್ ಲಿಮೆಟೆಡ್ ಗೆ ನೋಟೀಸ್ ಜಾರಿ ಮಾಡಿದೆ. ಈ ವೆಬ್ ಸೀರೀಸ್ ನಲ್ಲಿ ಈ ಪ್ರದೇಶವನ್ನು ಗೂಂಡಾಗಳ ನಗರದಂತೆ ತೋರಿಸುವ ಮೂಲಕ ನಗರದ ವರ್ಚಸ್ಸಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ನೋಟಿಸ್ ನೀಡಿದೆ.
ಯಶ್, ಚರಣ್ ಜೊತೆ ಶಂಕರ್ ಹಾಲಿವುಡ್ ರೇಂಜ್ ಸಿನಿಮಾ
ಮಿರ್ಜಾಪುರ ಹೆಸರಿನಲ್ಲಿ ಕೆಟ್ಟ ವಿಷಯವನ್ನು ತೋರಿಸುವುದು ನಗರದ ಶ್ರೀಮಂತ ಸಂಸ್ಕೃತಿಗೆ ಮಾಡಿದ ಅವಮಾನ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಎಸ್.ಎ. ಬೊಬ್ಡೆ ನೇತೃತ್ವದ ಪೀಠ ನೋಟಿಸ್ ಜಾರಿ ಮಾಡಿದ್ದು, ಕೇಂದ್ರ ಸರ್ಕಾರ, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಎಕ್ಸೆಲ್ ಎಂಟರ್ ಟೈನ್ ಮೆಂಟ್ ಪ್ರೈವೇಟ್ ಲಿಮೆಟೆಡ್ ಈ ಕುರಿತಾಗಿ ಪ್ರತಿಕ್ರಿಯೆ ನೀಡುವಂತೆ ನಿರ್ದೇಶಿಸಸಿದೆ. ಉತ್ತರ ಪ್ರದೇಶದ ಮಿರ್ಜಾಪುರದ ಐತಿಹಾಸಿಕತೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಕಾಪಾಡಬೇಕೆಂದು ಮಿರ್ಜಾಪುರ ನಿವಾಸಿ ಸುಜೀತ್ ಕುಮಾರ್ ಸಿಂಗ್ ಅರ್ಜಿ ಸಲ್ಲಿಸಿದ್ದರು.
ಶಿವಮೊಗ್ಗ ದುರಂತ : ನಟ ಕಿಚ್ಚ ಸುದೀಪ್ ಸಂತಾಪ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel