ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರು ತಮ್ಮ ಹೆಲ್ಮೆಟ್ ಕಳ್ಳತನವಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದ್ವಾರಕನಗರದ ಜಯದುರ್ಗ ಬೇಕರಿ ಹತ್ತಿರ ಕಳ್ಳತನವಾಗಿದೆ. ಇದರ ಬೆಲೆ 10 ಸಾವಿರ. ಹೀಗಾಗಿ ಹುಡುಕಿಕೊಡಬೇಕು ಎಂದು ಪೊಲೀಸರ ಮೊರೆ ಹೋಗಿದ್ದಾರೆ. ಸೂರ್ಯ ಎಂಬ ವ್ಯಕ್ತಿಯೇ ಈ ಕುರಿತು ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡಿದ್ದಾರೆ.
ಹೆಲ್ಮೆಟ್ ಕಳೆದುಕೊಂಡ ಸೂರ್ಯ ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ಎಲ್ ಎಲ್ ಬಿ ಓದುತ್ತಿದ್ದಾರೆ ಎನ್ನಲಾಗಿದೆ. ಕಳ್ಳತನವಾಗಿರುವ ಹೆಲ್ಮೆಟ್ ಆಕ್ಸರ್ ಕಂಪನಿಯದ್ದು, ಕಪ್ಪು ಮತ್ತು ಹಸಿರು ಬಣ್ಣ ಹೊಂದಿದೆ. ಸುಮಾರು 10 ಸಾವಿರ ರೂಪಾಯಿ ಬೆಲೆ ಬಾಳುತ್ತದೆ ಎಂದು ಸೂರ್ಯ ಹೇಳಿದ್ದಾರೆ.








