ಮೇಕೆ ಮರಿಗಳಿಗೆ ಫುಲ್ ಟಿಕೆಟ್ ನೀಡಿದ ಬಸ್ ಕಂಡಕ್ಟರ್ yadagiri saaksha tv
ಯಾದಗಿರಿ : ಬಸ್ ಕಂಡಕ್ಟರ್ ಮೇಕೆ ಮರಿಗಳಿಗೆ ಫುಲ್ ಟಿಕೆಟ್ ನೀಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ರೈತರಾದ ಸುನಿಲ್ ಹಾಗೂ ರಾಮಲಿಂಗ ಯಾದಗಿರಿಯಿಂದ ಕಲಬುರಗಿಗೆ ಬಸ್ ನಲ್ಲಿ ಮೇಕೆ ಮರಿಗಳನ್ನು ಕರೆದುಕೊಂಡು ಹೋಗಲು ಮುಂದಾಗಿದ್ದಾರೆ.
ಈ ವೇಳೆ ಬಸ್ ಕಂಡಕ್ಟರ್ ಎರಡು ಮೇಕೆ ಮರಿಗಳಿಗೆ ಫುಲ್ ಟಿಕೆಟ್ ನೀಡುವುದಾಗಿ ಹೇಳಿದ್ದಾರೆ. ಇದಕ್ಕೆ ಮೇಕೆ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆದರೂ ಬಸ್ ಕಂಡಕ್ಟರ್ ಮೇಕೆಗಳಿಗೆ ಫುಲ್ ಟಿಕೆಟ್ ನೀಡಿದ್ದಾರೆ.
ಕೆಎಸ್ ಆರ್ ಟಿಸಿ ಬಸ್ ನಲ್ಲಿ ಸಾಕು ಪ್ರಾಣಿ ಪಕ್ಷಿಗಳನ್ನ ಕರೆದೊಯ್ಯ ಬೇಕಾದರೆ ಪ್ರಯಾಣಿಕರಂತೆ ಪ್ರಾಣಿಗಳಿಗೂ ಟಿಕೆಟ್ ಪಡೆಯಲೇಬೇಕು ಎಂಬ ನಿಯಮವಿದೆ.
ಹೀಗಾಗಿ ಬಸ್ ಕಂಡಕ್ಟರ್ ಮೇಕೆಗಳಿಗೂ ಟಿಕೆಟ್ ನೀಡಿದ್ದಾರೆ.