ಕಾಂಗ್ರೆಸ್ ಸರ್ಕಾರವನ್ನು ನಾಟಕದ ಕಂಪನಿ ಎಂದು ಸಂಸದ ಗೋವಿಂದ ಕಾರಜೋಳ ಟೀಕಿಸಿದ್ದಾರೆ. ಅವರು ಚಿತ್ರದುರ್ಗದಲ್ಲಿ ನಡೆದ ದಲಿತ ಸಮಾವೇಶದ ಸಿದ್ಧತೆಗಳ ಕುರಿತು ಪ್ರತಿಕ್ರಿಯಿಸುತ್ತಾ, ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ 70 ವರ್ಷಗಳ ಪೈಕಿ 60 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತ ನಡೆಸಿದೆ. ಆದರೆ ಆ ಆಡಳಿತದ ಅವಧಿಯಲ್ಲಿ ಜನತೆಗೆ ಉತ್ತಮ ಸರ್ಕಾರ ನೀಡಲು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷ ತನ್ನ ಆಧಿಪತ್ಯ ಕಳೆದುಕೊಂಡಾಗ, ಮತದಾರರು ತಿರಸ್ಕರಿಸಿದಾಗ ಹೊಸ ಹೊಸ ರಾಜಕೀಯ ನಾಟಕಗಳನ್ನು ರಚಿಸುತ್ತಾರೆ. ಈಗಲೂ ಅದೇ ರೀತಿಯ ಗಿಮಿಕ್ ಮಾಡುತ್ತಿದ್ದಾರೆ ಎಂದು ಕಾರಜೋಳ ವಾಗ್ದಾಳಿ ನಡೆಸಿದ್ದಾರೆ.