ಪಂಜಾಬ್ ನಲ್ಲಿ ಇಂದು ರಾಹುಲ್ ಗಾಂಧಿ ಶಕ್ತಿ ಪ್ರದರ್ಶನ..
ಪಂಜಾಬ್ ವಿಧಾನಸಭಾ ಚುನಾವಣೆಯ ಭಾಗವಾಗಿ ರಾಹುಲ್ ಗಾಂಧಿ ಇಂದು ಪಂಜಾಬ್ ಗೆ ಹಾರಲಿದ್ದಾರೆ. ಚುನಾವಣಾ ಕಾವು ಜೋರಾಗಿದ್ದು ಪಂಜಾಬ್ ವಿಧಾನಸಭಾ ಚುನಾವಣಲ್ಲಿ ಸ್ಪರ್ಧಿಸಲಿರುವ ಲ್ಲಾ 117 ಅಭ್ಯರ್ಥಿಗಳೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ.
ಕಾಂಗ್ರೆಸ್ ಇಂದು ಪಂಜಾಬ್ ನಲ್ಲಿ ಶಕ್ತಿ ಪ್ರದರ್ಶನ ಕ್ಕೆ ಮುಂದಾಗಿದ್ದು ರಾಹುಲ್ ಗಾಂಧಿ ಅಭ್ಯರ್ಥಿಗಳೊಂದಿಗೆ ಧಾರ್ಮಿಕ ಕ್ಷೇತ್ರಗಳಿಗೆ ಬೇಟಿ ನೀಡಲಿದ್ದಾರೆ.Congress leader Rahul Gandhi visits Punjab
ರಾಹುಲ್ ಈಗಾಗಲೆ ಪಂಜಾಬ್ ತಲುಪಬೇಕಿತ್ತು ಆದರೆ ಪ್ರತಿಕೂಲ ಹವಮಾನದಿಂದಾಗಿ ಅವರ ವಿಶೇಷ ವಿಮಾನ ಒಂದು ಗಂಟೆ ತಡವಾಗಿ ಹೊರಡಲಿದೆ. ಬೆಳಗ್ಗೆ 9.30ಕ್ಕೆ ಅಮೃತಸರ ತಲುಪಬೇಕಿತ್ತು. ಈಗ ಅವರ ವಿಶೇಷ ವಿಮಾನವು 10:30 ಕ್ಕೆ ಅಮೃತಸರ ತಲುಪಲಿದೆ. ಇಲ್ಲಿಗೆ ತಲುಪಿದ ನಂತರ, 117 ಅಭ್ಯರ್ಥಿಗಳೊಂದಿಗೆ ರಾಹುಲ್ ಮೊದಲು ಶ್ರೀ ಹರ್ಮಿಂದರ್ ಸಾಹಿಬ್‌ಗೆ, ಅವರು ಶ್ರೀ ದುರ್ಗ್ಯಾನ ದೇವಸ್ಥಾನ ಮತ್ತು ಭಗವಾನ್ ವಾಲ್ಮೀಕಿ ತೀರ್ಥ ಗಳಲ್ಲಿ ಪೂಜೆಗಳಲ್ಲಿ ಭಾಗವಹಿಸಲಿದ್ದಾರೆ.
ಇದಾದ ಬಳಿಕ ರಾಹುಲ್ ಗಾಂಧಿ ಜಲಂಧರ್ ಗೆ ತೆರಳಲಿದ್ದಾರೆ. ಜಲಂಧರ್‌ನ ಮಿಥಾಪುರ್‌ನಿಂದ ಅವರು ಮಧ್ಯಾಹ್ನ 3.30 ರಿಂದ 4.30 ರವರೆಗೆ ‘ಪಂಜಾಬ್ ಫತೇ’ ಹೆಸರಿನಲ್ಲಿ ವರ್ಚುವಲ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ರ್ಯಾಲಿಗಳ ಮೇಲೆ ಚುನಾವಣಾ ಆಯೋಗ ನಿಷೇಧ ಹೇರಿದೆ.