ಮಹಿಳಾ ಸಂಸದರ ಜೊತೆ ಫೋಟೋ ಟ್ವೀಟ್ ಮಾಡಿ ಟೀಕೆಗೆ ಗುರಿಯಾದ ತರೂರ್
ಸಂಸತತಿನಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಶುರು ಆಗಿದೆ, ಅಧಿವೇಶನದಲ್ಲಿ ಭಾಗವಹಿಸಲು ಎಲ್ಲಾ ಜನಪ್ರತಿನಿಧಿಗಳು ತೆರಳಿಸದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೇಸ್ ನಾಯಕ ಹಿರಿಯ ಸಂಸದ ಶಶಿ ತರೂರ್ ಮಹಿಳಾ ಸಂಸದರ ಜೊತೆ ಪೋಟೋ ತೆಗೆಸಿಕೊಂಡು ಟ್ವೀಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಆ ಅದಕ್ಕೆ ಕೊಟ್ಟ ತಲೆಬರಹದಿಂದಾಗಿ ತರೂರ್ ಟೀಕೆಗೆ ಒಳಗಾಗಿದ್ದಾರೆ.
ಲೋಕಸಭೆ ಕೆಲಸ ಮಾಡಲು ಆಕರ್ಷಕ ತಾಣವಲ್ಲ ಅಂತ ಯಾರು ಹೇಳ್ತಾರೆ ? ಎನ್ನುವ ಕ್ಯಾಪ್ಶನ್ ನೀಡಿ ಪೋಸ್ಟ್ ಮಾಡಿದ್ದರು. ಟ್ವೀಟರ್ ಪೋಸ್ಟ್ ಗೆ ದೊಡ್ಡ ಮಟ್ಟದಲ್ಲಿ ಟೀಕೆ ಶುರುವಾದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಶಶಿ ತರೂರ್ ಕ್ಷಮೆಯಾಚನೆ ಮಾಡಿದ್ದಾರೆ.
ನಾನು ಒಳ್ಳೆಯ ಭಾವನೆಯಿಂದ ಮಹಿಳಾ ಸಂಸದರೊಂದಿಗೆ ಪೋಟೋ ತೆಗೆಸಿಕೊಂಡಿದ್ದೆ ಅವರು ಟ್ವೀಟರ್ ನಲ್ಲಿ ಹಾಕಿ ಎಂದಿರುವುದಕ್ಕೆ ನಾನು ಸೇರ್ ಮಾಡಿಕೊಂಡಿದೆ ಎಂದು ಕ್ಷಮೆ ಕೇಲಿ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಪೋಟೋದಲ್ಲಿ ಶಶಿ ತರೂರ್ ಜೊತೆ ಸಂಸದರಾದ ಸುಪ್ರಿಯ ಸುಳೆ, ಪ್ರನೀತ್ ಕೌರ್, ತಮಿಳ್ಸಾಚಿ, ಮಿಮಿ ಚಕ್ರವರ್ತಿ, ನುಸ್ರತ್ ಜಹಾನ್, ಜ್ಯೋತಿ ಮಣಿ ಕಾಣಿಸಿಕೊಂಡಿದ್ದಾರೆ.
The whole selfie thing was done (at the women MPs' initiative) in great good humour & it was they who asked me to tweet it in the same spirit. I am sorry some people are offended but i was happy to be roped in to this show of workplace camaraderie. That's all this is. https://t.co/MfpcilPmSB
— Shashi Tharoor (@ShashiTharoor) November 29, 2021