ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಈಗಿನಿಂದಲೇ ಬೃಹತ್ ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕರನ್ನು ಸಂಪರ್ಕಿಸುವ ಕಾರ್ಯವನ್ನು ಪ್ರಾರಂಭಿಸಿದ್ದು, ಜೆಡಿಎಸ್ ಶಾಸಕರ ಆಪರೇಷನ್ ಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಕಾಂಗ್ರೆಸ್ ನಾಯಕರು ಈಗಾಗಲೇ ಜೆಡಿಎಸ್ನ 6 ಶಾಸಕರನ್ನು ಸಂಪರ್ಕಿಸಿದ್ದು, ಒಟ್ಟಾರೆ 10 ಶಾಸಕರ ಸಂಪರ್ಕಕ್ಕೆ ಯತ್ನಿಸಿದ್ದಾರೆ. ವಿಶೇಷವಾಗಿ, ಬಿಜೆಪಿ ವಿರುದ್ಧ ಗೆದ್ದಿರುವ ಜೆಡಿಎಸ್ ಶಾಸಕರನ್ನು ಸೆಳೆಯಲು ಮೊದಲ ಆದ್ಯತೆ ನೀಡಲಾಗಿದೆ.
ಈ ಲಿಸ್ಟ್ನಲ್ಲಿ ದೇವದುರ್ಗ ಶಾಸಕಿ ಕರೆಮ್ಮ, ಶಾಸಕ ಸಮೃದ್ಧಿ ಮಂಜುನಾಥ್ ಸೇರಿ ಹಲವಾರು ಪ್ರಮುಖ ಮುಖಂಡರು ಇದ್ದಾರೆ. ಕಾಂಗ್ರೆಸ್ನ ಈ ತಂತ್ರ ಯಶಸ್ವಿಯಾಗುತ್ತದೆಯಾ ಅಥವಾ ಜೆಡಿಎಸ್ ಮತ್ತು ಬಿಜೆಪಿಯ ತಿರುಗೇಟು ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.







![pandavapura-free-health-camp-darshan-puttannaiah-october-8]](https://saakshatv.com/wp-content/uploads/2026/10/darsan-350x250.png)
