Congress | ಪಕ್ಷದ ಆಂತಕರಿ ವಿಚಾರ ಪ್ರಶ್ನೆ ಸಿದ್ದರಾಮಯ್ಯ ಮೌನವಾಗೋದು ಯಾಕೆ..?
ಬೆಂಗಳೂರು : ಸಿದ್ದರಾಮಯ್ಯ ಅವರೇ, ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರದ ಪ್ರಶ್ನೆ ಬಂದಾಗ ನೀವು ಮೌನಕ್ಕೆ ಶರಣಾಗುವುದೇಕೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ರಾಜ್ಯ ಬಿಜೆಪಿ ಘಟಕ ಪ್ರಶ್ನೆ ಮಾಡಿದೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಾರಿಗೆ ಜನರ ಪರಿಚಯ ಇಲ್ಲವೋ ಅವರಿಗೆ ಮಾತ್ರ ದೊಡ್ಡ ಫೋಟೋ ಇರುವ ಪೋಸ್ಟರ್ ಬೇಕಾಗುತ್ತದೆ ಎಂದಿರುವುದು ಡಿಕೆಶಿ ಉದ್ದೇಶಿಸಿ ಅಲ್ಲವೇ ಎಂದು ಕುಟುಕಿದೆ.
ಸಿದ್ದರಾಮಯ್ಯ ಅವರೇ, ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರದ ಪ್ರಶ್ನೆ ಬಂದಾಗ ನೀವು ಮೌನಕ್ಕೆ ಶರಣಾಗುವುದೇಕೆ?
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಾರಿಗೆ ಜನರ ಪರಿಚಯ ಇಲ್ಲವೋ ಅವರಿಗೆ ಮಾತ್ರ ದೊಡ್ಡ ಫೋಟೋ ಇರುವ ಪೋಸ್ಟರ್ ಬೇಕಾಗುತ್ತದೆ ಎಂದಿರುವುದು ಡಿಕೆಶಿ ಉದ್ದೇಶಿಸಿ ಅಲ್ಲವೇ?#ಕಾಂಗ್ರೆಸ್‌ಕಲಹ
— BJP Karnataka (@BJP4Karnataka) March 8, 2022
ನಿಮ್ಮ ಬಣವನ್ನು ಡಿಕೆಶಿ ಅವರು ಚಿಂದಿ ಮಾಡುತ್ತಾರೆ ಎಂಬ ಭಯ ಕಾಡುತ್ತಿದೆಯೇ?
ಅಥವಾ ಒಳ ಜಗಳ ಅನಾವರಣವಾದರೆ ಜನರು ತಿರಸ್ಕರಿಸಬಹುದೆಂಬ ಆತಂಕವೋ ಎಂದು ಟೀಕಿಸಿದೆ.
ಸಿದ್ದರಾಮಯ್ಯನವರೇ, ಸಿಎಂ ಬೊಮ್ಮಾಯಿ ಅವರ ಮೂಲದ ಬಗ್ಗೆ ಮಾತನಾಡುವ ನೀವು, ನಿಮ್ಮ ಮೂಲದ ಬಗ್ಗೆ ಏಕೆ ಮಾತನಾಡುವುದಿಲ್ಲ?
ಕಾಗೆಯ ಗೂಡಿನಲ್ಲಿ ಕೋಗಿಲೆ ಮೊಟ್ಟೆ ಇಟ್ಟ ಕತೆ ಎಲ್ಲರಿಗೂ ತಿಳಿದಿದೆ.
ಮೂಲ ಕಾಂಗ್ರೆಸ್ಸಿಗರ ಶ್ರಮದಲ್ಲಿ ಗಟ್ಟಿಯಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಎಲ್ಲೆಲ್ಲೋ ಸುತ್ತಾಡಿ ಬಂದು ಸಿಎಂ ಆಗಿದ್ದು ನಿಮಗೆ ಮರೆತು ಹೋಯಿತೇ ಎಂದು ಸಿದ್ದರಾಮಯ್ಯ ವಿರುದ್ಧದ ಕಿಡಿಕಾರಿದೆ ಬಿಜೆಪಿ.
congress-siddaramaiah karnataka bjp









