Congress | ಬೊಮ್ಮಾಯಿ ಅವರೇ, ಇದು ಹೇಡಿತನದ, ಲಜ್ಜೆಗೇಡಿತನದ ಪರಮಾವಧಿಯಲ್ಲವೇ
ಬೆಂಗಳೂರು : ಬಸವರಾಜ ಬೊಮ್ಮಾಯಿ ಅವರೇ, ಇದು ಹೇಡಿತನದ, ಲಜ್ಜೆಗೇಡಿತನದ ಪರಮಾವಧಿಯಲ್ಲವೇ ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.
ರಾಜ್ಯ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ, ದ್ವೇಷ ಭಾಷಣಕ್ಕೆ ಕೇಂದ್ರ ಸರ್ಕಾರವೇಕೆ ಮೂಕ ಪ್ರೇಕ್ಷಕನಂತೆ ವರ್ತಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಕೇಳಿದೆ.ಬಿಜೆಪಿ ಸರ್ಕಾರಕ್ಕೆ ದ್ವೇಷವೇ ಬಂಡವಾಳವಾಗಿರುವಾಗ,ಸ್ವತಃ ಕೇಂದ್ರದ ಸಚಿವರುಗಳೇ ದ್ವೇಷ ಬಿತ್ತುತ್ತಿರುವಾಗ,ಬಿಜೆಪಿಯೇ ದ್ವೇಷದ ಪೋಷಕರಾಗಿರುವಾಗ, ಬೇಲಿಯೇ ಎದ್ದು ಹೊಲ ಮೆಯುತ್ತಿರುವಾಗ ದ್ವೇಷ ಭಾಷಣದ ಜನಕರು ಉತ್ತರಿಸುವರೇ?
40% ಕಮಿಷನ್‌ಗೆ ಕಿರುಕುಳ ನೀಡಿ ಒಂದು ಜೀವ ಬಲಿ ಪಡೆದ ಆರೋಪಿಯಾಗಿದ್ದ ಈಶ್ವರಪ್ಪರನ್ನು ಒಂದು ದಿನವೂ ಬಂಧಿಸಿ ವಿಚಾರಣೆ ನಡೆಸಲಿಲ್ಲ. ಆದರೆ #PayCM ಪೋಸ್ಟರ್ ಅಂಟಿಸಿದವರ ವಿರುದ್ಧ 7,8 ಕೇಸ್‌ಗಳು, ಬಂಧನಕ್ಕೆ ವಿಶೇಷ ಪೊಲೀಸ್ ತಂಡ. ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರುಕುಳ. ಬಸವರಾಜ ಬೊಮ್ಮಾಯಿ ಅವರೇ, ಇದು ಹೇಡಿತನದ, ಲಜ್ಜೆಗೇಡಿತನದ ಪರಮಾವಧಿಯಲ್ಲವೇ ಎಂದು ಪ್ರಶ್ನಿಸಿದೆ.
ಬಿಜೆಪಿ ಗೆಲುವಿನ ಸೂತ್ರವೇ ಸುಳ್ಳು ಮಾಹಿತಿಗಳ ಅಪಪ್ರಚಾರ, ವಿರೋಧಿಗಳ ಚಾರಿತ್ರ್ಯಹನನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ.
ಸಾಮಾಜಿಕ ಮಾಧ್ಯಮವೂ ಸೇರಿದಂತೆ ಹೊಸ ತಂತ್ರಜ್ಞಾನವನ್ನು @BJP4India ಅವರಷ್ಟು ದುರುಪಯೋಗ ಪಡಿಸಿಕೊಂಡ ರಾಜಕೀಯ ಪಕ್ಷ ಜಗತ್ತಿನಲ್ಲಿ ಇನ್ನೊಂದಿಲ್ಲ. 3/5#PayCM #40PercentSarkara
— Siddaramaiah (@siddaramaiah) September 22, 2022
PSI ನೇಮಕಾತಿ ಅಕ್ರಮದಲ್ಲಿ15 ಲಕ್ಷ ಹಣ ಪಡೆದ ಶಾಸಕ ಬಸವರಾಜ ದಡೇಸಗೂರ ಅವರ ವಿಚಾರಣೆ ಇಲ್ಲ. 40% ಕಮಿಷನ್ ಪಡೆದ ಆರೋಪದ ಈಶ್ವರಪ್ಪ, ಮುನಿರತ್ನರ ವಿಚಾರಣೆ ಇಲ್ಲ. ಲೋಕಾಯುಕ್ತ ತನಿಖೆ ಎದುರಿಸಬೇಕಿರುವ ಎಸ್.ಟಿ ಸೋಮಶೇಖರ್ ರಾಜೀನಾಮೆ ಇಲ್ಲ. ಇವೆಲ್ಲವನ್ನು ಬಿಟ್ಟು ಬಸವರಾಜ ಬೊಮ್ಮಾಯಿ ಅವರು #PayCM ಪೋಸ್ಟರ್‌ಗಳ ಹಿಂದೆ ಬಿದ್ದಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಹೊಡೆಸಿದಾಗ ಬಿಜೆಪಿಗೆ ನೈತಿಕತೆಯ ನೆನಪಾಗಲಿಲ್ಲವೇ?ವಿರೋಧ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರಿಗೆ ಕೊತ್ವಾಲ್ ಶಿಷ್ಯ ಎಂದು ಅವಹೇಳನಕಾರಿಯಾಗಿ ಮಾತಾಡಿದಾಗ ನೈತಿಕತೆ ತಿಳಿದಿರಲಿಲ್ಲವೇ? ಭ್ರಷ್ಟರನ್ನು ಭ್ರಷ್ಟರು ಎಂದಾಗ,#PayCM ಎಂದಾಗ ಮಾತ್ರ ಬಿಜೆಪಿಗೆ ನೈತಿಕ ರಾಜಕಾರಣ ನೆನಪಾಯ್ತೆ ಎಂದು ಕುಟುಕಿದೆ.
ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಆರೋಪ-ಪ್ರತ್ಯಾರೋಪ ಸಹಜ ವಿದ್ಯಮಾನವಾದರೂ ಇದನ್ನು ಇಷ್ಟೊಂದು ಕೀಳು ಮಟ್ಟಕ್ಕೆ ತಂದು ನಿಲ್ಲಿಸಿದ ಕೀರ್ತಿ @BJP4Karnataka ಗೆ ಸಲ್ಲುತ್ತದೆ.
ಏನು @CMofKarnataka ಅವರೇ, ಬೇರೆಯವರಿಗೆ ಚುಚ್ಚಿದಾಗ ಖುಷಿಪಟ್ಟಿರಿ, ಯಾರೋ ನಿಮಗೆ ಚುಚ್ಚಿದ್ದಕ್ಕೆ ನೋವಾಯ್ತಾ? 5/5#PayCM #40PercentSarkara
— Siddaramaiah (@siddaramaiah) September 22, 2022
ಮನುಸ್ಮೃತಿಯ ಆರಾದಕರಾದ ಬಿಜೆಪಿ ಆಡಳಿತದಲ್ಲಿ ಮತ್ತೆ ಅಸ್ಪೃಶ್ಯತೆ ಜಾಗೃತವಾಗ್ತಿದೆಯೇ.ದಲಿತ ಬಾಲಕ ದೇವರ ಕೋಲು ಮುಟ್ಟಿದಕ್ಕೆ 60 ಸಾವಿರ ದಂಡ ವಿಧಿಸಿದ ಘಟನೆ ನಡೆದಿದ್ದರೂ #PayCM ಅವರು ಗಪ್‌ಚುಪ್.ಇದು ಕರ್ನಾಟಕಕ್ಕೆ ಅವಮಾನಕರ ಸಂಗತಿಯಲ್ಲವೇ ಬಸವರಾಜ ಬೊಮ್ಮಾಯಿ ಅವರೇ? ಪೋಸ್ಟರ್‌ನಷ್ಟೇ ಗಂಭೀರ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಮನಸಗಲಿಲ್ಲವೇ ಎಂದು ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.