ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಹೇಳಿಕೆಯನ್ನು ಆಧರಿಸಿ, ಭಾರತದಲ್ಲಿ ರಾಜಕೀಯ ಚರ್ಚೆಗಳು ಮತ್ತೆ ಚುರುಕುಗೊಂಡಿವೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ನ್ಯೂಕ್ಲಿಯರ್ ಯುದ್ಧವನ್ನು ತಡೆಯುವಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದೇನೆ ಎಂಬ ಟ್ರಂಪ್ ಹೇಳಿಕೆ ಸಂಚಲನ ಹುಟ್ಟಿಸಿದ್ದು, ಈ ಕುರಿತು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆ Xನಲ್ಲಿ ಜೈರಾಮ್ ರಮೇಶ್ ಮೋದಿ ಮೇಲೆ ಮುಗಿಬಿದ್ದಿದ್ದು, ಮೋದಿಯ ಸ್ನೇಹಿತ ಟ್ರಂಪ್ ಭಾರತ-ಪಾಕಿಸ್ತಾನ ನಡುವಿನ ಯುದ್ಧ ತಡೆಯಲು ವ್ಯಾಪಾರ ಸಂಬಂಧವನ್ನು ಬಳಸಿಕೊಂಡಿದ್ದು, ಕೇವಲ 21 ದಿನಗಳಲ್ಲಿ 11 ಬಾರಿ ಇದನ್ನು ಪುನರಾವರ್ತಿಸಿದ್ದಾರೆ. ಆದರೆ ಈ ಗಂಭೀರ ಹೇಳಿಕೆಗಳ ಬಗ್ಗೆ ಪ್ರಧಾನಿ ಮೋದಿ ಮೌನವಾಗಿರುವುದು ಆಶ್ಚರ್ಯಕರ. ಅವರು ಸುಳ್ಳು ಮಾತಾಡುತ್ತಿದ್ದಾರಾ? ಇಲ್ಲವೇ ನಿಜವೇ? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಪಕ್ಷದ ಇತರ ನಾಯಕರು ಕೂಡಾ ಮೋದಿ ಮೌನವನ್ನು ಟೀಕಿಸಿದ್ದಾರೆ. ದೇಶದ ಬಾಹ್ಯ ವ್ಯವಹಾರಗಳಿಗೆ ಸಂಬಂಧಿಸಿದ ವಿಷಯದಲ್ಲಿ ಇತರ ರಾಷ್ಟ್ರದ ನಾಯಕರ ಹೇಳಿಕೆಗಳಿಗೆ ಸ್ಪಷ್ಟನೆ ನೀಡುವುದು ಸರ್ಕಾರದ ಹೊಣೆಗಾರಿಕೆಯಾಗಿದೆ” ಎಂಬುದಾಗಿ ಕಾಂಗ್ರೆಸ್ ನಾಯಕರ ವಾದಿಸಿದ್ದಾರೆ
ಈ ನಡುವೆ, ಬಿಜೆಪಿ ಇನ್ನೂ ಅಧಿಕೃತವಾಗಿ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಆದರೆ, ರಾಜಕೀಯ ವಲಯದಲ್ಲಿ ಈ ವಿವಾದ ಮುಂದಿನ ದಿನಗಳಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.








