Rajiv assassination : ಅಪರಾಧಿಗಳ ಬಿಡುಗಡೆ ತೀರ್ಪು ಮರುಪರಿಶೀಲಿಸುವಂತೆ ಕೋರಿದ ಕಾಂಗ್ರೆಸ್…
ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರು ಅಪರಾಧಿಗಳನ್ನ ಬಿಡುಗಡೆ ಮಾಡುವ ತೀರ್ಪನ್ನ ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ನ್ನ ಕಾಂಗ್ರೆಸ್ ಕೋರಲಿದೆ ಎಂದು ಪಕ್ಷದ ಹಿರಿಯ ನಾಯಕ ಮತ್ತು ವಕೀಲ ಅಭಿಷೇಕ್ ಮನು ಸಿಂಘ್ವಿ ಸೋಮವಾರ ಹೇಳಿದ್ದಾರೆ.
ಭಾರತದ ಮಾಜಿ ಪ್ರಧಾನಿ ರಾಹುಲ್ ಗಾಂಧಿ ಹತ್ಯೆ ಪ್ರಕರಣದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್ ಮತ್ತು ಆರ್ ಪಿ ರವಿಚಂದ್ರನ್ ಸೇರಿದಂತೆ ಆರು ಮಂದಿಯನ್ನು ಅವಧಿಗೂ ಮುನ್ನ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ನವೆಂಬರ್ 11ರಂದು ನಿರ್ದೇಶನ ನೀಡಿತ್ತು.
ನಳಿನಿ ಮತ್ತು ರವಿಚಂದ್ರನ್ ಅವರಲ್ಲದೆ, ಬಿಡುಗಡೆಯಾದ ಇತರ ನಾಲ್ವರು ಸಂತನ್, ಮುರುಗನ್, ರಾಬರ್ಟ್ ಪಾಯಸ್ ಮತ್ತು ಜಯಕುಮಾರ್ ಅವರನ್ನ ಬಿಡುಗಡೆ ಮಾಡಿತ್ತು.
ಕಾಂಗ್ರೆಸ್, ತಾತ್ವಿಕವಾಗಿ, ಸುಪ್ರೀಂ ಕೋರ್ಟ್ ತೀರ್ಪನ್ನು ಮರುಪರಿಶೀಲಿಸಲು ನಿರ್ಧರಿಸಿದೆ ಎಂದು ಅಭಿಷೇಕ್ ಮನು ಸಿಂಘ್ವಿ ತಿಳಿಸಿದ್ದಾರೆ.
ಮಾಜಿ ಪ್ರಧಾನಿಯನ್ನು ಹತ್ಯೆಗೈದ ಅಪರಾಧಿಗಳಿಗೆ ವಿನಾಯತಿ ನೀಡುವ ಆದೇಶ ಪ್ರಕರಣದಲ್ಲಿ ವಿಚಾರಣೆಗೆ ಸಾಕಷ್ಟು ಅವಕಾಶವನ್ನು ನೀಡದೆ ಅಂಗೀಕರಿಸಲಾಗಿದೆ ಎಂದು ಕೇಂದ್ರ ಹೇಳಿತ್ತು.
Congress to seek review of SC order on release of Rajiv assassination convicts