“ಲಸಿಕೆ ನೀಡುವಿಕೆಯಲ್ಲಿ ಬಿಜೆಪಿ ಸರ್ಕಾರದ ಅಯೋಗ್ಯತನ ಸಾಭೀತು”

1 min read
Covid19 vaccination drive

“ಲಸಿಕೆ ನೀಡುವಿಕೆಯಲ್ಲಿ ಬಿಜೆಪಿ ಸರ್ಕಾರದ ಅಯೋಗ್ಯತನ ಸಾಭೀತು”

ಬೆಂಗಳೂರು : ಲಸಿಕೆ ನೀಡುವಿಕೆಯಲ್ಲಿ ಬಿಜೆಪಿ ಸರ್ಕಾರದ ಅಯೋಗ್ಯತನ ಸಾಭೀತಾಗಿದೆ. ರಾಜ್ಯದಲ್ಲಿ ಲಸಿಕೆಗಳ ಸ್ಟಾಕ್ ಮುಗಿಯುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಲಸಿಕೆ ನೀಡುವಿಕೆಯಲ್ಲಿ ಬಿಜೆಪಿ ಸರ್ಕಾರದ ಅಯೋಗ್ಯತನ ಸಾಭೀತಾಗಿದೆ. ರಾಜ್ಯದಲ್ಲಿ ಲಸಿಕೆಗಳ ಸ್ಟಾಕ್ ಮುಗಿಯುತ್ತಿದೆ.

congress

45+ ನವರಿಗೆ ಮೊದಲ ಡೋಸ್ ಇನ್ನೂ ಪೂರ್ಣವಾಗಿಲ್ಲ. ಸುಮಾರು 65 ಲಕ್ಷ ಎರಡನೇ ಡೋಸ್ ಬಾಕಿ ಇದೆ. 18+ ನವರಂತೂ ಕೇಳಲೇಬೇಡಿ.

ಅಬ್ಬರಿಸಿ ಬೊಬ್ಬಿರಿದ ಟೀಕಾ ಉತ್ಸವ ಮಕಾಡೆ ಮಲಗಿದೆ. ಬಿಜೆಪಿ ಪ್ರತಿಯೊಂದರಲ್ಲೂ ಸೋತಿದೆ ಎಂದು ಟೀಕಿಸಿದೆ.

ಮತ್ತೊಂದು ಟ್ವೀಟ್ ನಲ್ಲಿ ಲಸಿಕೆ ನೋಂದಣಿ ಬಂದ್..! ರಾಜ್ಯದಲ್ಲಿ 18+ ನವರ ಲಸಿಕೆ ನೋಂದಣಿಯನ್ನು ನಿರಾಕರಿಸಲಾಗಿದೆ.

ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಸಿದಂತೆ ಲಸಿಕೆ ತರಿಸದೆಯೇ ಅಬ್ಬರದ ಪ್ರಚಾರ ಮಾಡಿದ ಸರ್ಕಾರ ಈಗ ನಾಡಿದ ಜನತೆಗೆ ದ್ರೋಹ ಎಸಗಿದೆ.

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ಅಸಾಮಥ್ರ್ಯದ ಪ್ರತೀಕವಿದು. ಅಲ್ಲವೇ ಬಿಜೆಪಿ ನಾಯಕರೆ ಎಂದು ವ್ಯಂಗ್ಯವಾಡಿದೆ.

congress

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd