ಸೂರ್ಯ- ಚಂದ್ರ ಇರೋವರೆಗೂ ಸಂವಿಧಾನ ಬದಲಾವಣೆ ಅಸಾಧ್ಯ: ಆನಂದ ಸಿಂಗ್
ವಿಜಯನಗರ: ಸೂರ್ಯ- ಚಂದ್ರ ಇರೋವರೆಗೂ ಸಂವಿಧಾನ ಬದಲಾವಣೆ ಅಸಾಧ್ಯ ಎಂದು ಸಚಿವ ಆನಂದ ಸಿಂಗ್ ಹೇಳಿದ್ದಾರೆ.
ಹೊಸಪೇಟೆಯ ಕಮಲಾಪುರ ಪಟ್ಟಣದಲ್ಲಿ ಆಯೋಜನೆ ಮಾಡಲಾಗಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದ ಅವರು ಸಂವಿಧಾನ ಬದಲಾವಣೆ ಮಾಡೋದು ಅಸಾಧ್ಯವಾಗಿದೆ. ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುವ ಪದ ಬಳಕೆ ಮಾಡೋದೇ ಬೇಕಾಗಿಲ್ಲಾ. ಸಂವಿಧಾನ ಬದಲಾವಣೆ ಮಾಡೋದು ಯಾರಿಂದಾರಿ ಸಾಧ್ಯ? ಎಂದು ಸಚಿವರು ಪ್ರಶ್ನಿಸಿದರು.
ಅಲ್ಲದೇ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬ ಪದ ಬಳಕೆ ಮಾಡುವಾಗ ಬಹಳ ಮುಂದಾಲೋಚನೆ ಇಟ್ಕೊಂಡು ಪದ ಬಳಕೆ ಮಾಡಬೇಕು . ಮಾತನಾಡೋರು ಏನು ಬೇಕಾದನ್ನ ಮಾತನಾಡ್ತಾರೆ. ಆದರೆ ನಾನು ಮಾನವ ಜಾತಿ ರಕ್ಷಣೆ ಮಾಡಲು ಬಂದವನು ಎಂದರು.
ಇನ್ನ ನನಗೆ ಜಾತಿ, ಧರ್ಮ ಅನ್ನೋದೇನಿಲ್ಲಾ. ನಾನು ನಂಬಿಕೆ ಇಟ್ಟಿರೋದು ಮಾನವ ಧರ್ಮದಲ್ಲಿ ಮಾತ್ರ ಡಾ. ಬಾಬಾ ಸಾಹೇಬ್ ಹೇಳಿಕೊಟ್ಟಿದ್ದು, ಅದು ಮಾನವ ಜಾತಿ ಎಂದು ಹೇಳಿದರು.